ಮೆಲ್ಬರ್ನ್: ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು.ಜೋಶ್ ಹ್ಯಾಜಲ್ವುಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತದ ಒಂಬತ್ತು ಆಟಗಾರರು ಒಂದಂಕಿ ಮೊತ್ತಕ್ಕೇ ನಿರ್ಗಮಿಸಿದರು. ಭಾರತ 18.4 ಓವರುಗಳಲ್ಲಿ
125 ರನ್ಗಳಿಗೆ ಪತನಗೊಂಡಿತು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 68 ರನ್ ಗಳಿಸಿ ದಿಟ್ಟ ಹೋರಾಟ ನಡೆಸಿದರು. ಹ್ಯಾಜಲ್ವುಡ್ ದಾಳಿಯಿಂದ ತಂಡದ ಅರ್ಧದಷ್ಟು ಮಂದಿ 49 ರನ್ಗಳಾಗುವಷ್ಟರಲ್ಲಿ ಪೆವಿಲಿಯನ್ ಸೇರಿದ್ದರು.
ಎರಡಂಕಿ ಮೊತ್ತ ಗಳಿಸಿದ ಇನ್ನೊಬ್ಬ ಆಟಗಾರ ಹರ್ಷಿತ್ ರಾಣಾ (35, 33ಎ) ಜೊತೆ ಅಭಿಷೇಕ್ ಅವರು ಆರನೇ ವಿಕೆಟ್ಗೆ 56 ರನ್ ಸೇರಿಸಿದ್ದರಿಂದ ತಂಡ 100ರ ಗಡಿ ದಾಟಲು ಸಾಧ್ಯವಾಯಿತು.
ಹ್ಯಾಜಲ್ವುಡ್ 13 ರನ್ ನೀಡಿ 3 ವಿಕೆಟ್ ಕಿತ್ತರು.ಇದಕ್ಕೆ ಉತ್ತರವಾಗಿ, ಆಸ್ಟ್ರೇಲಿಯಾ ತಂಡವು ನಾಯಕ ಮಿಚೆಲ್ ಮಾರ್ಷ್ (46, 26ಎ) ಆಟದ ನೆರವಿನಿಂದ 13.2 ಓವರುಗಳಲ್ಲೇ 6 ವಿಕೆಟ್ ನಷ್ಟದಲ್ಲಿ ಗುರಿತಲುಪಿತು. ವರುಣ್ ಚಕ್ರವರ್ತಿ (23ಕ್ಕೆ2) ಬೂಮ್ರಾ (26ಕ್ಕೆ2) ಉತ್ತಮ ಬೌಲಿಂಗ್ ನಡೆಸಿದರು.ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯರು 1–0 ಮುನ್ನಡೆ ಪಡೆದರು. ಮೊದಲ ಪಂದ್ಯ ಮಳೆಯ ಪಾಲಾಗಿತ್ತು.












