ಪುತ್ತೂರು: ಕರ್ನಾಟಕ ಕಲಾಶ್ರೀ ವಿದ್ವಾನ್ ಕಾಂಚನ ವಿ ಸುಬ್ಬರತ್ನಂ ಇವರ ನೆನಪಿನಲ್ಲಿ ಸುನಾದ ಸಂಗೀತ ಕಲಾ ಶಾಲೆಯ ಗುರುಗಳು, ನಿರ್ದೇಶಕರೂ ಆಗಿರುವ ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರು ಪ್ರತೀ ವರ್ಷ ವಿಜಯ ದಶಮಿಯಂದು ನಡೆಸುತ್ತಾ ಬರುತ್ತಿರುವ
“ಗುರು ಸಂಸ್ಮರಣೆ” ಕಾರ್ಯಕ್ರಮ ಪುತ್ತೂರಿನ ಸುನಾದ ಸಭಾಂಗಣದಲ್ಲಿ ಜರುಗಿತು.
ಇದರ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ವೇಣು ವಾದನ ಕಛೇರಿಯನ್ನು ವಿದ್ವಾನ್ ಅಮಿತ್ ನಾಡಿಗ್ ಇವರು ನಡೆಸಿಕೊಟ್ಟರು. ಇವರಿಗೆ ವಯಲಿನ್ನಲ್ಲಿ ವಿದ್ವಾನ್ ಮುಲ್ಲೈವಾಸಲ್ ಚಂದ್ರಮೌಳಿ, ಮೃದಂಗದಲ್ಲಿ ವಿದ್ವಾನ್ ಎ ರಾಧೇಶ್ ಮೈಸೂರು ಹಾಗು ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಇವರು ಸಹಕರಿಸಿದರು. ವಿಜಯ ದಶಮಿಯಂದು ಬೆಳಿಗ್ಗಿನಿಂದಲೇ ಸುನಾದದ ವಿದ್ಯಾರ್ಥಿಗಳೆಲ್ಲಾ ಸಂಗೀತ ಸೇವೆಯನ್ನು ನೆರವೇರಿಸಿಕೊಟ್ಟರು. ವಿದುಷಿ ಮಾಲತಿ ಡಿ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.