ಕಣ್ಣೂರು: ಕೇರಳ ರಾಜ್ಯ ಸರ್ಕಾರದ ಸಮ್ಮರ್ ಬಂಪರ್ ಲಾಟರಿಯ 10 ಕೋಟಿ ರೂ ಬಹುಮಾನ ಕಣ್ಣೂರು ಆಲಕ್ಕೋಡ್ನ ಆಟೋ ಚಾಲಕ ನಾಸಿರ್ಗೆ ಒಲಿದಿದೆ.ನಿನ್ನೆ ನಡೆದ ಬಂಪರ್ ಡ್ರಾದಲ್ಲಿ10 ಕೋಟಿ ಪ್ರಥಮ ಬಹುಮಾನದ ಅದೃಷ್ಟ ನಾಸಿರ್ ಖರೀದಿಸಿದ ಟಿಕೆಟ್ಗೆ ಬಂದಿದೆ. ನಿನ್ನೆ ನಡೆದ ಡ್ರಾದ ಟಿಕೆಟನ್ನು
ನಾಸಿರ್ ಮಂಗಳವಾರ ರಾತ್ರಿಯಷ್ಟೇ ಖರೀದಿಸಿದ್ದರು. ಕಣ್ಣೂರು ಜಿಲ್ಲೆಯ ಆಲಕೋಡ್ ಪರಪ್ಪ ನಿವಾಸಿ ನಾಸರ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದಾರೆ.
ಅಪರೂಪಕ್ಕೊಮ್ಮೆ ಲಾಟರಿ ಟಿಕೆಟ್ ಖರೀದಿಸುವ ಹವ್ಯಾಸ ಹೊಂದಿದ್ದರು. ಟಿಕೆಟ್ ಸಂಖ್ಯೆಯ ಕುತೂಹಲ ಗಮನಿಸಿ ಎಸ್ಸಿ 308797 ಸಂಖ್ಯೆಯ ಟಿಕೆಟ್ನ್ನು ಆಲಕ್ಕೋಡ್ ರಾಜರಾಜೇಶ್ವರಿ ಲಾಟರಿ ಏಜನ್ಸಿಯಿಂದ ಟಿಕೆಟ್ ಪಡೆದು ಆಲಕೋಡ್ ಕಾರ್ತಿಕಪುರದಲ್ಲಿ ಮಾರಾಟ ಮಾಡುವ ರಾಜು ಎಂಬವರಿಂದ ನಾಸಿರ್ ಖರೀದಿಸಿದ್ದರು. ಈ ಲಾಟರಿಯಲ್ಲಿ ಅದೃಷ್ಠ ಖುಲಾಯಿಸಿ ಪ್ರಥಮ ಬಹುಮಾನ 10 ಕೋಟಿ ರೂ. ಬಹುಮಾನ ಗೆದ್ದರು.