ಸುಳ್ಯ:ವಿಧಾನಸಭಾ ಚುನಾವಣೆಯ ಕಾವಿನ ಮಧ್ಯೆ ರಾಜಕೀಯ ಸುದ್ದಿಗಳ ಭರಾಟೆಯ ಜೊತೆಗೆ ‘ದಿ ಸುಳ್ಯ ಮಿರರ್’ ಡಿಜಿಟಲ್ ಮಾಧ್ಯಮ ಪ್ರಕಟಿಸಿದ ಪಾಸಿಟಿವ್ ವರದಿಯೊಂದು ಟ್ರೆಂಡಿಂಗ್ ಆಗಿದೆ.ತಮ್ಮ ಜೀವನದಲ್ಲಿ ಸುಮಾರು 20 ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಇದರಲ್ಲಿ ಬಹುತೇಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ತಹಶೀಲ್ದಾರ್ ಹುದ್ದೆ ಸೇರಿ 12 ಸರಕಾರಿ ಇಲಾಖೆಗಳಲ್ಲಿ ಉದ್ಯೋಗ ದೊರಕಿದ್ದ ಬಳಿಕ ಉಪನ್ಯಾಸಕ ವೃತ್ತಿ ಆಯ್ಕೆ
ಮಾಡಿದ್ದ ಸುಳ್ಯ ತಾಲೂಕಿನ ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾಂತರಾಜು ಅವರ ಜೀವನ ಪಯಣ ಕುರಿತ ವಿಶೇಷ ವರದಿಯೊಂದನ್ನು ಸುಳ್ಯ ಮಿರರ್ ಪ್ರಕಟಿಸಿತ್ತು. ಈ ಸುದ್ದಿ ಭಾರೀ ವೈರಲ್ ಆಗಿದ್ದು 4 ದಿನದಲ್ಲಿ 30 ಸಾವಿರಕ್ಕೂಅಧಿಕ ಮಂದಿ ಓದಿದ್ದಾರೆ. ಮಾತ್ರವಲ್ಲದೆ ಸುದ್ದಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ತಹಶೀಲ್ದಾರ್ ಹುದ್ದೆ ಸೇರಿ 12 ಇಲಾಖೆಗಳಿಗೆ ಆಯ್ಕೆಯಾಗಿದ್ದರು ಈ ಉಪನ್ಯಾಸಕ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಮಾದರಿ ಕಾಂತರಾಜು ಜೀವನ ಪಯಣ..!’ ಎಂಬ ವಿಶೇಷ ವರದಿಯನ್ನು ಏ.27 ರಂದು ಸಂಜೆ ಪ್ರಕಟಿಸಿತ್ತು. ನಾಲ್ಕು ದಿನದಲ್ಲಿ 30,804 ಮಂದಿ ವರದಿ ಓದಿದ್ದಾರೆ. ಹಲವು ಮಂದಿ ವರದಿಯನ್ನು ಓದಿ ಕರೆ ಮಾಡಿ, ಎಸ್ಎಂಎಸ್ ಮೂಲಕ, ಇಮೇಲ್ ಮೂಲಕ ಸಂಪರ್ಕಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಓದುಗರಿಗೆ ಧನ್ಯವಾದಗಳು..!!