ಸುಳ್ಯ:ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶದ ಶೆಟ್ಟರ್ ಪರ ಸುಳ್ಯ ಕಾಯರ್ತೋಡಿಯ ಬಿಜೆಪಿ ಕಾರ್ಯಕರ್ತರು ಚುನಾವಣಾ ಪ್ರಚಾರ ಕೈಗೊಂಡರು.ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಸುಮಾಧರ ಎ.ಟಿ.ನೇತೃತ್ವದಲ್ಲಿ ಬೆಳಗಾವಿಗೆ ತೆರಳಿದ 15ಕ್ಕೂ ಹೆಚ್ಚು ಮಂದಿ ಕಾಯರ್ತೋಡಿಯ
ಕಾರ್ಯಕರ್ತರು ಏ.29ರಂದು ಬೆಳಗಾವಿ ನಗರ ಹಾಗೂ ಬಡಾವಣೆ ವ್ಯಾಪ್ತಿಯಲ್ಲಿ ಮತ ಯಾಚನೆ ನಡೆಸಿ ಬಿರುಸಿನ ಪ್ರಚಾರ ಕೈಗೊಂಡರು.
ತಂಡದಲ್ಲಿ ಕುಸುಮಾಧರ ಎ.ಟಿ, ಭವಾನಿಪ್ರಸಾದ್ ಎನ್, ದೀಪಕ್ ಅಳಿಕೆಮಜಲು, ರುಕ್ಮಯ್ಯ ದೇಂಗೋಡಿ, ಚರಣ್ ದೇಂಗೋಡಿ, ಪದ್ಮನಾಭ ದೇಂಗೋಡಿ, ವೆಂಕಪ್ಪ ಗೌಡ ಕೂಟೇಲು, ಸಚಿನ್ ದೇಂಗೋಡಿ, ಆನಂದ ನಡುಮುಟ್ಲು, ಮಹೇಶ್ ಕುದ್ಪಾಜೆ, ಕಿಶೋರ್ ಕಾಯರ್ತೋಡಿ, ಲೋಕೇಶ್ ದೇಂಗೋಡಿ, ಯಶೋಧರ, ಮಾಧವ ನಡುಮುಟ್ಲು, ಮನೋಜ್ ದೇಂಗೋಡಿ, ಸೃಜನ್ ದೇಂಗೋಡಿ ಮತ್ತಿತರರು
ತಂಡದಲ್ಲಿದ್ದರು.ಇವರೊಂದಿಗೆ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಧನಂಜಯ ಜಾಧವ್, ಮಹಾಶಕ್ತಿ ಕೇಂದ್ರದ ಉಚ್ಚಿಗಾವ್ ಅಧ್ಯಕ್ಷರಾದ ಪ್ರತೀಶ್ ಪಾಟೀಲ್, ಗ್ರಾ.ಪಂ.ಉಪಾಧ್ಯಕ್ಷರಾದ ಕಲ್ಲಪ್ಪ ಪಾಟೀಲ್, ಶಕ್ತಿ ಕೇಂದ್ರ ಪ್ರಮುಖ್ ಸಾಗರ್ ಪಾಟೀಲ್, ಬೂತ್ ಅಧ್ಯಕ್ಷ ರಾಜೀವ್ ಪಾಟೀಲ್ ಇದ್ದರು.