ಸುಳ್ಯ:ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಮಹತಿ ೬೨೩ ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು, ದ.ಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ. ಅದೇ ರೀತಿ ಸುಬ್ರಹ್ಮಣ್ಯ ಕುಮಾರಸ್ವಾಮಿಯ ಅಭಿಜ್ಞಾ, ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ದ್ವಿತಿ ಎಸ್.622 ಮತ್ತು ಸುಳ್ಯ ರೋಟರಿ ಪ್ರೌಢಶಾಲೆಯ ಕೀರ್ತನಾ ಸಿ.ವಿ. ೬೨೨ ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ
ಪಡೆದುಕೊಂಡಿದ್ದಾರೆ. ಅದೇ ಶಾಲೆಯ ಸನಿಹಾ ಶೆಟ್ಟಿ ೬೨೦ ಅಂಕ, ಬೆಳ್ಳಾರೆ ಕೆಪಿಎಸ್ನ ಭವಿಷ್ 612 ಅಂಕ ಗಳಿಸಿದ್ದಾರೆ.ಗುತ್ತಿಗಾರಿನ ಕುರಿಯಾಕೋಸ್ ವಿದ್ಯಾಸಂಸ್ಥೆಯ ಖುಷಿ ಹಾಲೆಮಜಲು ೬೦೨ ಅಂಕ ಪಡೆದಿದ್ದಾರೆ. ಕುಮಾರಸ್ವಾಮಿ ವಿದ್ಯಾಲಯದ ಮಹತಿ ಇವರು ಬಳ್ಪ ಗ್ರಾಮದ ಎಡೋಣಿ ವಿಶ್ವೇಶ್ವರ ಬಿ ಹಾಗೂ ಪುಷ್ಪವತಿ ಯು ದಂಪತಿಗಳ ಪುತ್ರಿ. ಸಮಾಜ ವಿಜ್ಞಾನ, ಇಂಗ್ಲೀಷ್, ಗಣಿತ, ಸಂಸ್ಕ್ರತ ವಿಷಯದಲ್ಲಿ ೧೦೦ ಅಂಕ, ಕನ್ನಡದಲ್ಲಿ ೧೨೫ ವಿಜ್ಞಾನದಲ್ಲಿ ೯೮ ಅಂಕ ಪಡೆದಿದ್ದಾರೆ. ಇದೇ ಶಾಲೆಯ ಅಭಿಜ್ಞಾ ಅವರು ೬೨೨ ಅಂಕ ಪಡೆದು ದ.ಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕುಮಾರಸ್ವಾಮಿ ವಿದ್ಯಾಲಯಕ್ಕೆ ಶೇ.೧೦೦
ಸುಬ್ರಹ್ಮಣದ ಕುಮಾರಸ್ವಾಮಿ ವಿದ್ಯಾಲಯಕ್ಕೆ ಶೇ.೧೦೦ ಲಭಿಸಿದೆ. ಒಟ್ಟು ೯೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗಿ ಶೇ.೧೦೦ ಫಲಿತಾಂಶ ಬಂದಿದೆ. ೨೧ ವಿದ್ಯಾರ್ಥಿಗಳು ಎ+ ಶ್ರೇಣಿ ಪಡೆದಿದ್ದಾರೆ. ೨೮ ವಿದ್ಯಾರ್ಥಿಗಳು ಎ ಶ್ರೇಣಿ ಪಡೆದಿದ್ದಾರೆ. ೨೩ ವಿದ್ಯಾರ್ಥಿಗಳು ಬಿ+ ಶ್ರೇಣಿ, ೧೯ ಮಂದಿ ಬಿ ಶ್ರೇಣಿ, ಹಾಗೂ ೩ ಮಂದಿ ಸಿ+ ಶ್ರೇಣಿ ಪಡೆದಿದ್ದಾರೆ.
ಅಭಿಜ್ಞಾ
ಸುಳ್ಯ ರೋಟರಿ ಪ್ರೌಢ ಶಾಲೆಗೆ ಶೇ. ೧೦೦
ಸುಳ್ಯ ರೋಟರಿ ವಿದ್ಯಾಸಂಸ್ಥೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿದೆ. ೪೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲರೂ ಪಾಸಾಗಿದ್ದಾರೆ. ೨೧ ಮಂದಿ ಡಿಸ್ಟಿಂಕ್ಷನ್ ಗಳಿಸಿದ್ದಾರೆ.
ಕೀರ್ತನಾ ಸಿ.ವಿ
ಸನಿಹಾ ಶೆಟ್ಟಿ
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್.ಎಸ್.ಎಲ್.ಸಿ.ಯಲ್ಲಿ 100%
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ.92.17 ಫಲಿತಾಂಶ ಬಂದಿದೆ.
ಪರೀಕ್ಷೆಗೆ ಹಾಜರಾದ 179 ಮಂದಿ ವಿದ್ಯಾರ್ಥಿಗಳಲ್ಲಿ 165 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
23 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.
110 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ದ್ವಿತಿ ಎಸ್.622 ಅಂಕ,ಭವಿಷ್ 612 ಅಂಕ ಗಳಿಸಿದ್ದಾರೆ.
ದ್ವಿತಿ
ಭವಿಷ್
ಯೇನೆಕಲ್ಲು ಸರಕಾರಿ ಪ್ರೌಢಶಾಲೆ ಶೇ. ೧೦೦
ಯೇನೆಕಲ್ಲು ಸರಕಾರಿ ಪ್ರೌಢ ಶಾಲೆ ಶೇ. ೧೦೦ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ೨೧ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಐದು ಮಂದಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕುರಿಯಾಕೋಸ್ ಶೇ. ೧೦೦
ಗುತ್ತಿಗಾರಿನ ಕುರಿಯಾಕೋಸ್ ವಿದ್ಯಾ ಸಂಸ್ಥೆಯು ಶೇ.೧೦೦ ಫಲಿತಾಂಶ ಗಳಿಸಿದೆ. ಒಟ್ಟು ೨೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗಿದ್ದಾರೆ. ೧೦ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ೧೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಒರ್ವರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾದರು. ಖುಷಿ ಹಾಲೆಮಜಲು ೬೦೮ ಅಂಕ ಪಡೆದು ಶಾಲೆಗೆ ಟಾಪರ್ ಆಗಿ ಮೂಡಿಬಂದಿದ್ದಾರೆ.
ಸ್ನೇಹ ಶಿಕ್ಷಣ ಸಂಸ್ಥೆಗೆ ಶೇ.೧೦೦
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಶೇ.೧೦೦ ಫಲಿತಾಂಶ ಗಳಿಸಿದೆ. ಒಟ್ಟು ೧೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ಎಲ್ಲರೂ ತೇರ್ಗಡೆಯಾಗಿದ್ದಾರೆ.
ಜ್ಞಾನದೀಪ ವಿದ್ಯಾಸಂಸ್ಥೆಗೆ ಶೇ.೧೦೦ :
ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಗೆ ಶೇ.೧೦೦ ಫಲಿತಾಂಶ ಲಭಿಸಿದೆ. ಒಟ್ಟು ೨೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೨೨ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ೧೦ ವಿದ್ಯಾರ್ಥಿಗಳು ವಿಶಿಷ್ಟ
ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕು.ಬಿಂದುಶ್ರೀ ಪಿ.ವಿ ೫೮೭ ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಗೆ ಶೇ.೧೦೦
ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯು ಶೇ.೧೦೦ ಫಲಿತಾಂಶ ಗಳಿಸಿದೆ. ಒಟ್ಟು ೬೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗಿದ್ದಾರೆ.
ಕೆ. ಎಸ್. ಗೌಡ ಪ್ರೌಢಶಾಲೆ ೧೦೦ ಶೇ.
ಕೆ.ಎಸ್ ಗೌಡ ಎಜ್ಯುಕೇಶನ್ ಟ್ರಸ್ಟ್ನ ಆಶ್ರಯದಲ್ಲಿರುವ ಕೆ. ಎಸ್. ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶೇ. ೧೦೦% ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಐದು ವಿದ್ಯಾರ್ಥಿಗಳಲ್ಲಿ ಐವರೂ ತೇರ್ಗಡೆ ಆಗಿರುತ್ತಾರೆ. ಕು. ರಚನಾ ಕೆ.ಸಿ. ೫೪೭ ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಅರಂತೋಡು ತೆಕ್ಕಿಲ್ ಪ್ರೌಢಶಾಲೆಗೆ ಶೇ.೧೦೦
ಅರಂತೋಡಿನ ತೆಕ್ಕಿಲ್ ಪ್ರೌಢಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಾಗಿದೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ ಒಟ್ಟು ೧೦ ಮಂದಿ ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆ ಹೊಂದಿದ್ದಾರೆ.
ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗೆ ಶೇ.೯೯.೫
ಸುಳ್ಯದ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಶೇ.೯೯.೫ ಫಲಿತಾಂಶ ಗಳಿಸಿದೆ. ಒಟ್ಟು ೧೦೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ೧೦೧ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶೇ.೯೩
ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡಿದ್ದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶೇ.೯೩% ಫಲಿತಾಂಶ ಲಭಿಸಿದೆ. ಒಟ್ಟು ೩೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೨೮ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ೪ ಮಂದಿ ಡಿಸ್ಟಿಂಕ್ಷನ್ ನಲ್ಲಿ ಶ್ರಾವ್ಯ ಎನ್.ಪಿ ೬೦೨, ಮಾನ್ಯಶ್ರೀ ೫೮೫, ಮೇಘನಾ ೫೭೫, ಯಶ್ವಿತ್ ಎಸ್ ೫೬೮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇಬ್ಬರು ಮಾತ್ರ ಅನುತ್ತೀರ್ಣರಾಗಿರುತ್ತಾರೆ.
ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಗೆ ೯೬.೨೯
ಎಸ್.ಎಸ್ ಎಲ್.ಸಿ ಮುಖ್ಯ ಪರೀಕ್ಷೆಯ ಪಲಿತಾಂಶ ಇಂದು ಪ್ರಕಟಗೊಂಡಿದ್ದು ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಗೆ ೯೬.೨೯ % ಫಲಿತಾಂಶ ಲಭಿಸಿದೆ .ಫಾತಿಮತ್ ಶಾಝಿಯಾ ೫೮೯ ಅಂಕಗಳೊAದಿಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಆಯಿಷತ್ ಜುಮಾನ ೫೫೩,ಫಾತಿಮತ್ ಜುಮೈಲಾ ೫೪೭,ಹುದೈಫಾ ೫೨೮, ಶಮ್ನಾ ಫಾತಿಮಾ ಪಿ.ಎಸ್ ೫೨೫, ಫಾತಿಮತ್ ಶೈಮಾ ೫೦೬.ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾಳೆ.