ಸುಳ್ಯ: ಸುಳ್ಯ ನಗರದಲ್ಲಿ ರಾತ್ರಿ ಸಾಧಾರಣ ಮಳೆಯಾಗಿದೆ. ರಾತ್ರಿ 10.30 ರ ಮಳೆ ಆರಂಭಗೊಂಡಿದ್ದು ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆಯ ವೇಳೆ ದಟ್ಟ ಮೋಡ ಕವಿದಿತ್ತು.ರಾತ್ರಿಯ ವೇಳೆ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆ
ಸುರಿದು ತಂಪೆರೆದಿದೆ. ಸಂಜೆಯ ವೇಳೆ ಮತ್ತು ರಾತ್ರಿ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಮತ್ತು ಜಿಲ್ಲೆಯ ಕೆಲವೆಡೆ ಸಾಧಾರಣದಿಂದ ಉತ್ತಮವಮಳೆ ಸುರಿದಿದೆ.
ಬಳ್ಪಪಟೋಳಿಯಲ್ಲಿ, ಮಡಪ್ಪಾಡಿ, ನೆಟ್ಟಣ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದ್ದು 40 ಮಿ.ಮಿ.ಮಳೆ ಬಂದಿದೆ. ಬಳ್ಪ, ಸಂಪಾಜೆ ಉತ್ತಮ ಮಳೆಯಾಗಿದೆ. ಉಜಿರೆ, ನಿಡ್ಲೆ, ಬೂಡುಜಾಲು, ಶಿಶಿಲ ಮಳೆಯಾಗಿದೆ. ಕೇನ್ಯ ಬಳ್ಪ, ಕಲ್ಮಡ್ಕ, ಕಡಬ, ಎಣ್ಮೂರಿನ ಅಲೆಂಗಾರ, ಎಣ್ಮೂರು, ಪಂಜ, ಮರ್ಕಂಜ, ಬಾಳಿಲ, ದೊಡ್ಡತೋಟದ ಕಿಲಾರ್ಕಜೆಯಲ್ಲಿ, ಮುರುಳ್ಯ ಗ್ರಾಮದ ಶೇರದಲ್ಲಿ, ಉಬರಡ್ಕದಲ್ಲಿ ಮಳೆಯಾಗಿದೆ. ತಾಲೂಕಿನಲ್ಲಿ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮೇ.11 ರವರೆಗೆ ಮಳೆ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.