ಹೈದರಾಬಾದ್: ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿತು. 166 ರನ್ ಗುರಿ ಬೆನ್ನಟ್ಟಿದ ಎಸ್ಆರ್ಎಚ್ 18.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಹೈದ್ರಾಬಾದ್ ತಂಡಕ್ಕೆ
ಅಭಿಷೇಕ್ ಶರ್ಮ ಹಾಗೂ ಟ್ರಾವಿಸ್ ಹೆಡ್ ಬಿರುಸಿನ ಆರಂಭ ನೀಡಿದರು.ಅಭಿಷೇಕ್ ಶರ್ಮ ಸ್ಪೋಟಕ ಬ್ಯಾಟಿಂಗ್ ನಡೆಸಿ ಕೇವಲ 12 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 37 ರನ್ ಬಾರಿಸಿದರು. ಟ್ರಾವಿಸ್ ಹೆಡ್ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 31ರನ್ ಬಾರಿಸಿದರು. ಆಡಂ ಮರ್ಕರಂ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 50 ರನ್ ಸಿಡಿಸಿದರು. ಮೊದಲು ಬ್ಯಾಟಿಂಗ್ ನಡೆಸಿದ
ಚೆನ್ನೈ ಬ್ಯಾಟರ್ಗಳು ಹೈದರಾಬಾದ್ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿದರು. ಶಿವಂ ದುಬೆ ಬಿರುಸಿನ ಬ್ಯಾಟಿಂಗ್ ಮೂಲಕ ಚೆನ್ನೈಗೆ ಹುರುಪು ತುಂಬಿದರು.
ಶಿವಂ ದುಬೆ 45(24 ಎಸೆತ, 2 ಬೌಂಡರಿ, 4 ಸಿಕ್ಸರ್), ಅಜಿಂಕ್ಯ ರಹಾನೆ 35, ರವೀಂದ್ರ ಜಡೇಜ ಅಜೇಯ 31 ರನ್ ಸಿಡಿಸಿದರು. ನಾಯಕ ಋತುರಾಜ್ ಗಾಯಕ್ವಾಡ್ 26 ರನ್ ಬಾರಿಸಿದರು. ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದ ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ 12 ರನ್ಗೆ ಔಟಾದರು.ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ (28/1), ನಾಯಕ ಪ್ಯಾಟ್ ಕಮಿನ್ಸ್(29/1), ಜೈದೇವ್ ಉನಾದ್ಕಟ್(29/1) ಶಿಸ್ತಿನ ಬೌಲಿಂಗ್ ದಾಳಿ ನಡೆಸಿದರು. ಶಾಬಾಸ್ ಮತ್ತು ಟಿ. ನಟರಾಜನ್ ತಲಾ 1 ವಿಕೆಟ್ ಪಡೆದರು. 4 ಪಂದ್ಯಗಳನ್ನಾಡಿರುವ ಎಸ್ಆರ್ಎಚ್ ಎರಡನೇ ಜಯ ದಾಖಲಿಸಿದೆ.ಚೆನ್ನೈ 4 ಪಂದ್ಯಗಳನ್ನಾಡಿದ್ದು ಎರಡರಲ್ಲಿ ಜಯಿಸಿದೆ.