ಲಖನೌ: ಏಕದಿನ ವಿಶ್ವಕಪ್ನ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಗೆಲುವಿಗೆ 312 ರನ್ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್
ಅಮೋಘ ಶತಕ ದಾಖಲಿಸಿದರು. 106 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 109 ರನ್ ಗಳಿಸಿದರು ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು. ಈ ವಿಶ್ವಕಪ್ನಲ್ಲಿ ಡಿಕಾಕ್ ಅವರ ಎರಡನೇ ಶತಕವಾಗಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧವೂ ಶತಕ ದಾಖಲಿಸಿದ್ದಾರು.
ಆಫ್ರಿಕಾ ಪರ ಆಡಂ ಮರ್ಕರಂ ಅರ್ಧ ಶತಕ(56) ದಾಖಲಿಸಿದರೆ ನಾಯಕ ತೆಂಬಾ ಬವುಮಾ 35, ಹೆನ್ರಿಚ್ ಕ್ಲಾಸನ್ 29 ರನ್ ಬಾರಿಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ತಲಾ ಎರಡು ವಿಕೆಟ್ ಪಡೆದರು.