ಜೈಪುರ:ಅರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಅವರ ಆಕರ್ಷಕ ಶತಕ ಹಾಗೂ ನಾಯಕ ಸಂಜು ಸ್ಯಾಮ್ಸನ್ ಅರ್ಧ ಶತಕದ ನರವಿನಿಂದ ರಾಜಸ್ಥಾನ್ ರೋಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 6 ವಿಕೆಟ್ಗಳ ಜಯ ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಆರಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ರಾಜಸ್ಥಾನ್ ರೋಯಲ್ಸ್19.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಐಪಿಎಲ್ನಲ್ಲಿ ಆರ್ಸಿಬಿ ಆಡಿದ 5 ಪಂದ್ಯಗಳಲ್ಲಿ 4ನೇ ಸೋಲನುಭವಿಸಿದೆ. ರಾಜಸ್ಥಾನ್ ರಾಯಲ್ಸ್ ಆಡಿದ ನಾಲ್ಕೂ ಪಂದ್ಯಗಳಲ್ಲಿ
ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಆರ್ಸಿಬಿ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ ಬಟ್ಲರ್- ಸ್ಯಾಮ್ಸನ್ ಜೋಡಿ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈದರು. ಇವರಿಬ್ಬರು ಎರಡನೇ ವಿಕೆಟ್ಗೆ 147 ರನ್ ಗಳಿಸಿ ಭದ್ರ ಬುನಾದಿ ಹಾಕಿದರು. ಬಟ್ಲರ್ 58 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಬೌಂಡರಿ ನೆರವಿನಿಂದ ಅಜೇಯ100 ರನ್ ಬಾರಿಸಿದರು. ಸಿಕ್ಸರ್ ಬಾರಿಸಿ ಶತಕ ಪೂರ್ತಿ ಮಾಡಿದ ಬಟ್ಲರ್ ಶತಕ ದಾಖಲಿಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಂಜು ಸ್ಯಾಮ್ಸನ್ 42ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಬೌಂಡರಿ ನೆರವಿನಿಂದ 69 ರನ್ ಬಾರಿಸಿದರು.
ಯಶಸ್ವಿ ಜೈಸ್ವಾಲ್ ಸೊನ್ನೆ ಸುತ್ತಿದರೆ ರಿಯಾನ್ ಪರಾಗ್ 4 ರನ್ ಗಳಿಸಿ ಔಟ್ ಆದರು. ಶಿಮ್ರಾನ್ ಹೆಟ್ಮೇರ್ ಅಜೇಯ 11 ರನ್ ಗಳಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದರು. ಕೊಹ್ಲಿ 72 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಾಯದಿಂದ ಅಜೇಯ 113 ರನ್ ಬಾರಿಸಿದರು. ನಾಯಕ ಎಫ್ಡು ಪ್ಲೆಸಿಸ್ ಹಾಗೂ ಕೊಹ್ಲಿ ಮೊದಲ ವಿಕೆಟ್ಗೆ 14 ಓವರ್ಗಳಲ್ಲಿ 125 ರನ್ ಜೊತೆಯಾಟ ನಡೆಸಿ ಆರ್ಸಿಬಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಡುಪ್ಲೆಸಿಸ್ 33 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 44 ರನ್ ಬಾರಿಸಿದರು. ಮ್ಯಾಕ್ಸ್ವೆಲ್ 1, ಎಸ್.ಚೌಹಾನ್ 9 ಕ್ಯಾಮರೂನ್ ಗ್ರೀನ್ ಅಜೇಯ 5 ರನ್ ಗಳಿಸಿದರು.