ಬೆಂಗಳೂರು:ಚಂದ್ರನ ದಕ್ಷಿಣ ಧ್ರುವದಲ್ಲಿ ಓಡಾಟ ನಡೆಸಿರುವ ಪ್ರಗ್ಯಾನ್ ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ. ರೋವರ್ನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದ್ದು ಸ್ಲೀಪ್ ಮೋಡ್ನಲ್ಲಿ ಇಡಲಾಗಿದೆ ಎಂದು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಪ್ರಗ್ಯಾನ್ ರೋವರ್ನ್ನು APXS ಮತ್ತು LIBS ಪೇಲೋಡ್ಗಳನ್ನು ಆಫ್ ಮಾಡಲಾಗಿದೆ. ಪೇಲೋಡ್ಗಳಿಂದ ದತ್ತಾಂಶ

ಲ್ಯಾಂಡರ್ ಮೂಲಕ ರವಾನೆ ಆಗುತ್ತೆ. ಪ್ರಸ್ತುತ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ. ಸೆ.22ರಂದು ಮುಂದಿನ ಸೂರ್ಯೋದಯದಲ್ಲಿ ಬೆಳಕು ನಿರೀಕ್ಷಿಸಲಾಗಿದೆ. ಬೆಳಕು ಸ್ವೀಕರಿಸಲು ಸೌರಫಲಕದ ರಿಸೀವರ್ನ್ನು ಆನ್ನಲ್ಲಿ ಇರಿಸಲಾಗಿದೆ. ಮುಂದಿನ ಸೂರ್ಯೋದಯದಂದು ಕಾರ್ಯ ಮುಂದುವರಿಸುವ ವಿಶ್ವಾಸವಿದ್ದು, ಮತ್ತೊಂದು ಸುತ್ತಿನ ಅಸೈನ್ಮೆಂಟ್ಗೆ ರೋವರ್ ಸಿದ್ಧವಾಗುವ ಭರವಸೆ ಇದೆ. ಇದು ಸಾಧ್ಯವಾಗದಿದ್ದರೆ ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಹಲವು ಖನಿಜಗಳನ್ನು ರೋವರ್ ಪತ್ತೆ ಮಾಡಿತ್ತು. ಮುಖ್ಯವಾಗಿ ಚಂದ್ರನಲ್ಲಿ ಸಲ್ಫರ್ ಅಂದರೆ ಗಂಧಕ ಇರುವಿಕೆಯನ್ನು ರೋವರ್ ದೃಢಪಡಿಸಿತ್ತು.