ಲಖನೌ: ಬೌಲರ್ಗಳ ಸಂಘಟಿತ ದಾಳಿಯಿಂದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 18 ರನ್ಗಳ ರೋಚಕ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 126 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಬೌಲಿಂಗ್ಗೆ ಅನುಕೂರಕರವಾದ
ಪಿಚ್ನಲ್ಲಿ ಆರ್ಸಿಬಿ ಬೌಲರ್ಗಳು ಲಖನೌ ತಂಡವನ್ನು 19.5 ಓವರ್ಗಳಲ್ಲಿ 108 ರನ್ಗೆ ಆಲೌಟ್ ಮಾಡಿ 18 ರನ್ಗಳ ಜಯ ಗಳಿಸಿದರು. ಆರ್ಸಿಬಿ ಪರ ರೋಝ್ ಹಜಲ್ವುಡ್ ಹಾಗು ಕರನ್ ಶರ್ಮ ತಲಾ ಎರಡು ವಿಕೆಟ್ ಪಡೆದರೆ, ಶಿರಾಜ್, ಮ್ಯಾಕ್ಸ್ವೆಲ್, ಹರ್ಷಲ್ ಪಟಾಎಲ್ ಹಾಗು ಹಸರಂಗಾ ತಲಾ ಒಂದು ವಿಕೆಟ್ ಪಡೆದರು. ಲಖನ್ ಪರ 23 ರನ್ ಗಳಿಸಿದ ಕೃಷ್ಣಪ್ಪ ಗೌತಂ ಟಾಪ್ ಸ್ಕೋರರ್ ಎನಿಸಿದರು. ಅಮಿತ್ ಮಿಶ್ರ 19 ರನ್ ಗಳಿಸಿದರು. ಫೀಲ್ಡಿಂಗ್ ವೇಳೆ ಕಾಲಿಗೆ ಗಾಯಗೊಂಡ ನಾಯಕ ಕೆ.ಎಲ್.ರಾಹುಲ್ ಕೊನೆಯವರಾಗಿ ಕ್ರೀಸಿಗೆ ಇಳಿದರೂ ರನ್ಗಾಗಿ ಓಡಲು ಸಾಧ್ಯವಾಗುತ್ತಿರಲಿಲ್ಲ. ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ
ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಫಪ್ ಡು ಪ್ಲೆಸಿಸ್ 44, ವಿರಾಟ್ ಕೊಹ್ಲಿ 31 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರರು ಸಹ ಅಷ್ಟಾಗಿ ಪರಿಣಾಮಕಾರಿಯಾಗಲಿಲ್ಲ. ದಿನೇಶ್ ಕಾರ್ತಿಕ್ 16 ರನ್ ಗಳಿಸಿದರು. ಲಖನೌ ಪರ ನವೀನ್ ಉಲ್ ಹಕ್ 3, ರವಿ ಬಿಷ್ಣೋಯಿ ಮತ್ತು ಅಮಿತ್ ಮಿಶ್ರಾ ತಲಾ 2 ವಿಕೆಟ್ ಕಿತ್ತು ಸಂಭ್ರಮಿಸಿದರು.