ಸುಳ್ಯ:ಸತತ ಎರಡನೇ ದಿನ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಬೆಳಗ್ಗಿನ ಜಾವ ಆರಂಭಗೊಂಡ ಮಳೆ ವಿವಿಧ ಕಡೆಗಳಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಸುರಿಯಿತು. ಗುಡುಡು ಸಿಡಿಲಿನ ಅಬ್ಬರದೊಂದಿಗೆ ವಿವಿಧೆಡೆ ಉತ್ತಮ ಮಳೆಯಾಗಿದೆ. ವಿವಿಧ ಕಡೆ ಸುರಿದ ಮಳೆಯ ಬಗ್ಗೆ ಮತ್ತು ಮಳೆಯ ಸಾಧ್ಯತೆಯ ಕುರಿತು
ಮಳೆಯ ದಾಖಲೆ ಮಾಡುವ ಮತ್ತು ಹವಾಮಾನ ಅಧ್ಯಯನ ಆಸಕ್ತರಾದ ಕೃಷಿಕ ಪ್ರಸನ್ನ ಎಣ್ಮೂರು ಹಾಗೂ ಶ್ರೀಧರ ರಾವ್ ಹೈದಂಗೂರು ಅವರು ಮಾಹಿತಿ ನೀಡಿದ್ದಾರೆ.
ಸುಳ್ಯ ನಗರದಲ್ಲಿ 30 ಮಿ.ಮಿ. ಮಳೆ ಸುರಿದಿದೆ.ಸುಳ್ಯ ನಗರದಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿದ್ದು ಕಳೆದ ಮೂರು ದಿನಗಳಲ್ಲಿ ಒಟ್ಟು 143 ಮಿ.ಮಿ.ಮಳೆಯಾಗಿದೆ ಎಂದು ಸುಳ್ಯ ನಗರದಲ್ಲಿ ಮಳೆ ದಾಖಲೆ ಮಾಡುವ ಶ್ರೀಧರ ರಾವ್ ಹೈದಂಗೂರು ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಎಲ್ಲೆಡೆ
ಉತ್ತಮ ಮಳೆಯಾಗಿದೆ ಎಂದು ಪ್ರಸನ್ನ ಎಣ್ಮೂರು ಮಾಹಿತಿ ನೀಡಿದ್ದಾರೆ. ಬೆಳ್ಳಾರೆ ಕಾವಿನಮೂಲೆ, 50 ಮಿ.ಮೀ ಮಳೆ, ಮುರುಳ್ಯ ಗ್ರಾಮದಲ್ಲಿ 47 ಮಿ.ಮಿ, ಕೇನ್ಯ 35ಮಿ.ಮೀ, ಬಳ್ಪ ಪಟೋಳಿಯಲ್ಲಿ 83 ಮಿ ಮೀ, ಬಾಳಿಲ 50 ಮಿಮೀ ಮಳೆಯಾದರೆ ಬಳ್ಪ , ಬೆಳಗಿನ ಜಾವ ಕೇವಲ ನಲ್ವತ್ತು ನಿಮಿಷಗಳಲ್ಲಿ 89 ಮಿ.ಮೀ ಮಳೆಯಾಗಿದೆ. ದೊಡ್ಡತೋಟದ ಕೀಲಾರ್ಕಜೆಯಲ್ಲಿ 36 ಮಿಮೀ, ಪೆಲತಡ್ಕ 23ಮಿ.ಮಿ, ಎಡಮಂಗಲ ಗ್ರಾಮದ ದೇವರಮಜಲುವಿನಲ್ಲಿ 24 ಗಂಟೆಯಲ್ಲಿ 72 ಮಿ.ಮಿ. ಅಯ್ಯನಕಟ್ಟೆಯಲ್ಲಿ 52 ಮಿ.ಮಿ. ನಡುಗಲ್ಲು 59 ಮಿ.ಮಿ,ಮಡಪ್ಪಾಡಿ 15 ಮಿ.ಮಿ.ಕಲ್ಮಡ್ಕ ಗ್ರಾಮದ ಕಾಂಚಿಲದಲ್ಲಿ 24ಗಂಟೆಗಳಲ್ಲಿ 46 ಮಿಮೀ. ಸುಬ್ರಹ್ಮಣ್ಯ 98 ಮಿ.ಮಿ.
ಮರ್ಕಂಜ ಮಾಪಲತೋಟದಲ್ಲಿ 24 ಮಿ.ಮಿ, ಹರಿಹರ ಮಲ್ಲಾರ – 30 ಮಿ.ಮಿ. ಹರಿಹರಪಳ್ಳತಡ್ಕ ಕೂಜುಗೋಡು 54, ಉಬರಡ್ಕದಲ್ಲಿ 55 ಮಿ.ಮಿ.ಮಳೆ,ಅಯ್ಯನಕಟ್ಟೆಯಲ್ಲಿ 52 ಮಿ.ಮಿ ಮಳೆಯಾಗಿದೆ. ಮಿ.ಮಿ.ಮಳೆಯಾಗಿದೆ. ಸತತ ಎರಡನೇ ದಿನವೂ ಬೆಳಗ್ಗಿನ ಜಾವ ಉತ್ತಮ ಮಳೆಯಾಗಿ ಭೂಮಿಗೆ ತಂಪೆರೆದಿದೆ.
ಮಳೆ ಮುಂದುವರಿಕೆ:
ಕರ್ನಾಟಕದ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ,ಕೊಡಗು, ಶಿವಮೊಗ್ಗ, ಉತ್ತರ ಒಳನಾಡಿನ ಯಾದಗಿರಿ, ಕಲಬುರಗಿಯಲ್ಲಿ ಇಂದಿನಿಂದ ಮೇ 17ರವರೆಗೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಇಂದೂ ಕೂಡ ಮಳೆ ಮುಂದುವರೆಯಲಿದೆ ಎಂದು ಇಲಾಖೆ ಸೂಚನೆ ನೀಡಿದೆ.