ಸುಳ್ಯ:ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 312 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 306 ಮಂದಿ ತೇರ್ಗಡೆಯಾಗಿ ಶೇ.98 ಫಲಿತಾಂಶ ದಾಖಲಾಗಿದೆ. ಒಟ್ಟು 44 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ 65 ವಿದ್ಯಾರ್ಥಿಗಳಲ್ಲಿ 64 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 98.46 ಫಲಿತಾಂಶ ಬಂದಿದೆ. 17 ಮಂದಿ
ದೇವಿಪ್ರಿಯಾ
ಆಶಿತಾ
ಅಲಿನಾ ಕೆ.ಅಬ್ರಹಾಂ
ವಿಶಿಷ್ಟ ಶ್ರೇಣಿ ಪಡೆದಿದ್ದಾರೆ. ಆಶಿತಾ ಎಂ. 575 ಅಂಕ ಗಳಿಸಿ ತರಗತಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ವಾಣೀಜ್ಯ ವಿಭಾಗದಲ್ಲಿ 126 ಮಂದಿಯಲ್ಲಿ 125 ಮಂದಿ ತೇರ್ಗಡೆಯಾಗಿದ್ದು, 99.20 ಫಲಿತಾಂಶ ಬಂದಿದೆ. 21ಮಂದಿ ವಿಶಿಷ್ಟ ಶ್ರೇಣಿ ಗಳಿಸಿದ್ದಾರೆ. ಅಲಿನಾ ಕೆ. ಅಬ್ರಾಹಂ 581 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆರ್ಟ್ಸ್ ವಿಭಾಗದಲ್ಲಿ 121 ವಿದ್ಯಾರ್ಥಿಗಳಲ್ಲಿ 117 ಮಂದಿ ತೇರ್ಗಡೆಯಾಗಿದ್ದು,ಶೇ.96.69 ಫಲಿತಾಂಶ ಲಭಿಸಿದೆ. 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಪಡೆದಿದ್ದಾರೆ. ದೇವಿಪ್ರಿಯ ಪಿ. 561ಅಂಕ ಗಳಿಸಿ ತರಗತಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರೋಟರಿ ಪಿ. ಯು. ಕಾಲೇಜು:
ಸುಳ್ಯ ರೋಟರಿ ಪಿ.ಯು. ಕಾಲೇಜಿನಲ್ಲಿ ಒಟ್ಟು 36 ವಿದ್ಯಾರ್ಥಿಗಳಲ್ಲಿ ಎಲ್ಲಾ 36 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು,ಶೇ. 100 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 24ರಲ್ಲಿ 24 ಮಂದಿ ಉತ್ತೀರ್ಣರಾಗಿದ್ದಾರೆ. ಧೃತಿ ರಾಜೇಶ್ ಕೆದಿಲಾಯ 578 ಅಂಕ ಗಳಿಸಿ ತರಗತಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ವಾಣೀಜ್ಯ ವಿಭಾಗದಲ್ಲಿ 12 ವಿದ್ಯಾರ್ಥಿಗಳಲ್ಲಿ 12 ಮಂದಿ ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಪ್ರಣವ್ ಪಿ. 560 ಅಂಕ ಗಳಿಸಿ ತರಗತಿಗೆ ಮೊದಲಿಗರಾಗಿದ್ದಾರೆ.