ಸುಳ್ಯ: 33 ಕೆವಿ ಲೈನ್ ಮೇಲೆ ಮರ ಬಿದ್ದು ಸುಳ್ಯಕ್ಕೆ ವಿದ್ಯುತ್ ಸಂಪರ್ಕ 4 ಗಂಟೆಗೂ ಹೆಚ್ಚು ಸಮಯ ಕಡಿತಗೊಂಡಿತ್ತು. 6.30ರ ವೇಳೆಗೆ ಕಡಿತಗೊಂಡ ವಿದ್ಯುತ್ ಸಂಪರ್ಕ ರಾತ್ರಿ 10.30ರ ವೇಳೆಗೆ ಸರಿಪಡಿಸಲಾಗಿದೆ. ಕಾವು ಎಂಬಲ್ಲಿ ಮರ ಬಿದ್ದು ಲೈನ್ ಸಂಪರ್ಕ
ಕಡಿತಗೊಂಡಿತ್ತು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಗಾಳಿ ಮಳೆಯ ಕಾರಣ ಸಂಜೆ 6.30ರ ವೇಳೆಗೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಸುಳ್ಯ ನಗರ ಸೇರಿದಂತೆ ವಿವಿಧ ಕಡೆ ಕತ್ತಲಲ್ಲಿ ಕಳೆಯುವಂತಾಗಿತ್ತು. ಸುಳ್ಯ ನಗರ ಸೇರಿದಂತೆ ಎಲ್ಲೆಡೆ ಕತ್ತಲು ಆವರಿಸಿತ್ತು. ರಾತ್ರಿ 10.30ರ ವೇಳೆಗೆ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿದೆ.