ಸುಳ್ಯ: 207-ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಂತೆ ಅಗತ್ಯ ಸೇವೆಗಳ ಮೇಲಿರುವ ಗೈರು ಹಾಜರಿ ಮತದಾರರು ಅಂಚೆ ಮತಪತ್ರದ ಮುಖಾಂತರ ಮತದಾನ ಮಾಡುವುದಕ್ಕೆ ಸಂಬಂಧಿಸಿ
ನಮೂನೆ 12 ಡಿ ಯನ್ನು ಸಲ್ಲಿಸಿದವರು ಮತದಾನ ಮಾಡುವುದಕ್ಕೆ ಮೇ.2 ರಿಂದ 4ರ ತನಕ ಸುಳ್ಯ ತಾಲೂಕು ಕಛೇರಿಯಲ್ಲಿ ಪೂ. 9 ರಿಂದ ಅಪರಾಹ್ನ 5ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆದುದರಿಂದ ಸದ್ರಿ ದಿನಾಂಕಗಳಲ್ಲಿ ಸುಳ್ಯ ತಾಲೂಕು ಕಛೇರಿಯಲ್ಲಿ ತೆರೆಯಲಾಗುವ ಮತಗಟ್ಟೆಗೆ ಬಂದು ಮತದಾನ ಮಾಡಬಹುದು ಎಂಸು
207 ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.