ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಇಂದು ಕ್ಷೇತ್ರದ ವಿವಿಧ ಕಡೆಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ, ಕಾರ್ನರ್ ಮೀಟಿಂಗ್ ಮೂಲಕ
ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡರು.ಗುಂಡ್ಯ, ಬಿಳಿನೆಲೆ,ನೆಟ್ಟಣ ಮರ್ದಾಳದಲ್ಲಿ ಕಾರ್ನರ್ ಮೀಟಿಂಗ್ ನಡೆಯಿತು. ಪೆರುವಾಜೆ, ಬೆಳ್ಳಾರೆ ಮನೆ ಮನೆ ಪ್ರಚಾರ ನಡೆಸಿದರು.
ರಂಜಿತ್, ಪ್ರೀತಮ್ ಬಿಳಿನೆಲೆ ಇಂದು ಪಕ್ಷಕ್ಕೆ ಸೇರ್ಪಡೆಗೊಂಡರು.
ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಅಭ್ಯರ್ಥಿ
ಸುಮನಾ ಬೆಳ್ಳಾರ್ಕರ್ ಮುಖಂಡರಾದ ಕಲಂದರ್ ಎಲಿಮಲೆ
ಗುರುಪ್ರಸಾದ್ ಮೇರ್ಕಜೆ, ಎಸ್ ಎಂ ಮರ್ದಾಳ
ಹರೀಶ್ ಕಡಪಾಲ, ಬಶೀರ್, ರಾಮಕೃಷ್ಣ ಬೀರಮಂಗಿಲ
ಮತ್ತು ಇತರರು ಉಪಸ್ಥಿತರಿದ್ದರು