ಬೆಳ್ಳಾರೆ:ಸುಳ್ಯ ತಾಲೂಕಿನ ಪೆರುವಾಜೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣೀಜ್ಯ ವಿಭಾಗ ಮತ್ತು ಕಾಮರ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ ಅಂತರ್ ಕಾಲೇಜು ಕಾಮರ್ಸ್ ಫೆಸ್ಟ್ ‘ಎಕ್ಸಲೆನ್ಸಿಯಾ’ ಮೇ.29 ರಂದು ಕಾಲೇಜಿನ ರಂಗ ಮಂದಿರದಲ್ಲಿ ಆಯೋಜಿಸಲಾಯಿತು. ಫೆಸ್ಟ್ ಅಂಗವಾಗಿ ಸರಕಾರಿ ಕಾಲೇಜುಗಳ ವಾಣೀಜ್ಯ ವಿಭಾಗದ
ವಿಷಯಗಳಿಗೆ ಸಂಬಂಧಪಟ್ಟು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ದಕ್ಷಿಣ ಕನ್ನಡ, ಕೊಡಗು ಸೇರಿ ರಾಜ್ಯದ ವಿವಿಧ ಕಡೆಗಳಿಂದ 18 ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಶ್ಲಾಘನೀಯ ಕಾರ್ಯ- ಭಾಗೀರಥಿ ಮುರುಳ್ಯ:
ಸರಕಾರಿ ಕಾಲೇಜಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಕಾಮರ್ಸ್ ಫೆಸ್ಟ್ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನು ಹೊಂದಿರುವ ಡಾ.ಶಿವರಾಮ ಕಾಲೇಜು ಯಾವ ಖಾಸಗೀ ಕಾಲೇಜಿಗೂ ಕಡಿಮೆ ಇಲ್ಲದಂತೆ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ವನ್ನು ಗಳಿಸಿ ಉತ್ತಮ ವೃತ್ತಿಯನ್ನು ಪಡೆದು ಜೀವನದಲ್ಲಿ ಔನ್ನತ್ಯವನ್ನು ಸಾಧಿಸಬೇಕು ಎಂದು ಆಶಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ದಾಮೋದರ ಕಣಜಾಲು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಣ್ಣಾಜಿ ಗೌಡ, ಕಾಲೇಜಿನ ಐಕ್ಯುಎಸಿ ಸಂಚಾಲಕಿ ಜ್ಯೋತಿ ಎಸ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಯತೀಶ್ ಕುಮಾರ್ ಎಂ, ವಿದ್ಯಾರ್ಥಿ ಕ್ಷೇಮಾಧಿಕಾರಿ ಕಾಂತರಾಜು ಸಿ, ವಾಣೀಜ್ಯ ಸ್ನಾತಕೋತ್ತರ ವಿಭಾಗದ ಸಂಚಾಲಕಿ ಪ್ರತಿಮಾ ಶೆಟ್ಟಿ, ಕಾಮರ್ಸ್ ಫೆಸ್ಟ್ ಸಂಚಾಲಕರಾದ ಶ್ರವಣ್ ಕುಮಾರ್, ಅರ್ಷಿಯಾ, ಕಾಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಲತೀನ್ ಡಿ, ಕಾರ್ಯದರ್ಶಿ ಶ್ರೇಯಾ ಉಪಸ್ಥಿತರಿದ್ದರು. ಚೈತ್ರ ಸ್ವಾಗತಿಸಿ, ಹರ್ಷಿತಾ ವಂದಿಸಿದರು. ಹರ್ಷಿಯಾ ನಿರೂಪಿಸಿದರು. ನೂತನ ಶಾಸಕಿಯಾಗಿ ಆಯ್ಕೆಯಾದ ಭಾಗೀರಥಿ ಮುರುಳ್ಯ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.