ಸುಳ್ಯ: ಸುಳ್ಯ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸುಳ್ಯದ ಹೊಸ ಶಾಸಕರು ಪ್ರಯತ್ನ ನಡೆಸಲಿ. ಜೊತೆಗೆ ಜನ ಸಾಮಾನ್ಯರಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿ ಎಂದು ಆಶಿಸುತ್ತೇನೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಅವರು ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಅಭ್ಯರ್ಥಿ ಸೋತರೂ ಸರಕಾರದ ಜನಪರ ಯೋಜನೆ ಅರ್ಹರಿಗೆ ತಲುಪಿಸುವ ಜವಾಬ್ದಾರಿಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಪಕ್ಷ ವಹಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post