ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸಿದ್ದೇವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. 35 ಸಾವಿರಕ್ಕೂ ಅಧಿಕ ಬಹುಮತ ನಿರೀಕ್ಷಿಸಿದ್ದವು. ಮತ ಚಲಾವಣೆಯಲ್ಲಿ ಕುಸಿತ ಆದ ಕಾರಣ ಬಹುಮತ ಸ್ವಲ್ಪ ಕಡಿಮೆ ಆಯಿತು. ಬಿಜೆಪಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ಕೆ ಜನರು ಮತ ನೀಡಿದ್ದಾರೆ ಎಂದರು.