The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಜನರನ್ನು ಓದಿನೆಡೆಗೆ ಮತ್ತೆ ಕರೆ ತರುವುದು ಮಾಧ್ಯಮಗಳ ಮುಂದಿರುವ ದೊಡ್ಡ ಸವಾಲು: ಎಂ.ನಾ.ಚಂಬಲ್ತಿಮಾರ್ ಅಭಿಮತ:ಸುಳ್ಯದಲ್ಲಿ ಪತ್ರಿಕಾ ದಿನಾಚರಣೆ: ಚಂದ್ರಾವತಿ ಬಡ್ಡಡ್ಕ ಅವರಿಗೆ ಸನ್ಮಾನ

by ದಿ ಸುಳ್ಯ ಮಿರರ್ ಸುದ್ದಿಜಾಲ July 20, 2022
by ದಿ ಸುಳ್ಯ ಮಿರರ್ ಸುದ್ದಿಜಾಲ July 20, 2022
Share this article

ಸುಳ್ಯ:ಕೊರೋನಾ ಕಾಲದಲ್ಲಿ ಅಡಿಮೇಲಾಗಿದ್ದ ಪತ್ರಿಕೋದ್ಯಮವು ಭರವಸೆ ಮೂಡಿಸಿ ಮತ್ತೆ ಚಿಗುರಿ ಕೊಳ್ಳುತಿದೆ. ಜನರನ್ನು ಓದಿನೆಡೆಗೆ ಮತ್ತೆ ಕರೆ ಬೇಕಾಗಿರುವುದು ಪತ್ರಿಕೋದ್ಯಮದ‌ ಮುಂದಿರುವ ದೊಡ್ಡ ಸವಾಲು ಎಂದು ಹಿರಿಯ ಪತ್ರಕರ್ತ,ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಹಾಗು ಸುಳ್ಯ ಮಿರರ್ ವೆಬ್ ಸೈಟ್ ಅಂಕಣಕಾರ ಎಂ.ನಾ.ಚಂಬಲ್ತಿಮಾರ್ ಹೇಳಿದ್ದಾರೆ. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜು.20 ರಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ‘ಪ್ರಚಲಿತ ಪತ್ರಿಕೋದ್ಯಮ’ದ ಕುರಿತು ಉಪನ್ಯಾಸ ನೀಡಿದರು. ಕಾಲಘಟ್ಟಕ್ಕೆ ಅನುಸಾರವಾಗಿ ಮಾಧ್ಯಮಗಳು

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಯೋಚನೆ ಮಾಡಿ ಪರಿಷ್ಕರಣೆಕೊಳ್ಳಬೇಕು‌. ಜನರ ಧ್ವನಿಯಾಗಿ ಓದುಗರನ್ನು ತನ್ನೆಡೆಗೆ ಸೆಳೆಯುವ ಹಾಗೆ ರೂಪುಗೊಳ್ಳಬೇಕು ಎಂದರು. ಮುದ್ರಣ ಮಾಧ್ಯಮಕ್ಕೆ ಎಂದೂ ಸಾವಿಲ್ಲ. ಆದರೆ ಮುದ್ರಣ‌‌ ಮಾಧ್ಯಮಗಳು ಕಾಲಕ್ಕನುಸಾರವಾಗಿ ಬದಲಾವಣೆ ಆಗಬೇಕಾಗಿದೆ. ಪತ್ರಕರ್ತರು ಕೂಡ ಬದಲಾವಣೆಗೆ ಒಗ್ಗಿಕೊಂಡು ಅಪ್‌ಡೇಟ್ ಆಗಬೇಕು. ಸಾಮಾಜಿಕ ಜಾಲತಾಣಗಳ ಪ್ರಭಾವ ಕಡಿಮೆ ಆಗಲಿದೆ, ವಿಷಯಗಳನ್ನು ಅರೋಚಕವಾಗಿ ಬಿಂಬಿಸುವ, ಕಾರಣ ಜನರು ಸಾಮಾಜಿಕ ಜಾಲತಾಣಗಳಿಂದ ನಿಧಾನವಾಗಿ ವಿಮುಖರಾಗುತ್ತಾರೆ. ಜನರು ಮುದ್ರಣ ಮಾಧ್ಯಮಗಳ ಭಾಷೆ ಮತ್ತು ಸುದ್ದಿ ಸಂಸ್ಕೃತಿಯೆಡೆಗೆ ಮರಳಿ ಬರಲಿದ್ದಾರೆ. ಅದಕ್ಕಾಗಿ ಪತ್ರಕರ್ತರು ಉತ್ತಮ ಓದಿನ‌ ಮೂಲಕ ತಮ್ಮ ಬರವಣಿಗೆ ಮತ್ತು ಭಾಷೆಯನ್ನು ಬೆಳೆಸಿಕೊಂಡು ಆಕರ್ಷಕ ವೃತ್ತಿ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು‌. ದುಡಿಮೆ,ಬದ್ಧತೆಯ ಮೂಲಕ ಸವಾಲನ್ನು ಎದುರಿಸಿ ತಮ್ಮ‌ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾಜ ಮತ್ತು ಪತ್ರಿಕೋದ್ಯಮದ‌ ಮಧ್ಯೆ ಅ‌ವಿನಾಭಾವ ಸಂಬಂಧ ಇದೆ. ಪ್ರಾಮಾಣಿಕ ಮತ್ತು ಬದ್ಧತೆ ಇರುವ ಪತ್ರಕರ್ತರನ್ನು ಸಮಾಜ ಎಂದು ಕೈ ಬಿಡುವುದಿಲ್ಲ. ಕೊರೋನಾ ಕಾಲದಲ್ಲಿ ಪತ್ರಕರ್ತರೆಡೆಗೆ ಸಮಾಜದಿಂದ ಹರಿದು ಬಂದ ನೆರವು ಅದಕ್ಕೆ ಉದಾಹರಣೆ. ಮಾಧ್ಯಮವು

ಉದ್ಯಮದ ಭಾಗವಾಗದರೂ ಪ್ರಜಾಪ್ರಭುತ್ವದ ತನ್ನ ಜವಾಬ್ದಾರಿಯನ್ನು ಮರೆಯದೆ ಜನತಾ ಪಕ್ಷವಾಗಿ ಮುಂದುವರಿಯಬೇಕು ಎಂದರು.

ಲೇಖನಿಯಿಂದ ಸಮಸ್ಯೆಗೆ ಪರಿಹಾರ: ಸೀತಾರಾಮ ರೈ:
ಕಾರ್ಯಕ್ರಮವನ್ನು ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸಹಕಾರಿ ರತ್ನ ಸೀತಾರಾಮ ರೈ ಸವಣೂರು ‘ತಮ್ಮ ಲೇಖನಿಯಿಂದಲೇ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವವರು ಪತ್ರಕರ್ತರು. ಕ್ರಿಯಾಶೀಲ ಮತ್ತು ಜನಪರ ಪತ್ರಿಕೋದ್ಯಮಕ್ಕೆ ಎಂದೂ ಹಿನ್ನಡೆಯಾಗುವುದಿಲ್ಲ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತೆ, ಸುಳ್ಯ ಮಿರರ್‌ ವೆಬ್ ಸೈಟ್‌ನ ಅರೆಭಾಷೆ ಅಂಕಣ ‘ಹರ್ಟೆ’ ಖ್ಯಾತಿಯ ಚಂದ್ರಾವತಿ ಬಡ್ಡಡ್ಕ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಸೀತಾರಾಮ ರೈ ಸವಣೂರು ಅವರನ್ನು ಸನ್ಮಾನಿಸಲಾಯಿತು.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಕೃಷ್ಣ ಬೆಟ್ಟ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಸುಳ್ಯ ತಾಲೂಕು ಸಂಘದ ಮಾಜಿ ಅಧ್ಯಕ್ಷ ದುರ್ಗಾಕುಮಾರ್ ನಾಯರ್‌ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ದಯಾನಂದ ಕೊರತ್ತೋಡಿ ವಂದಿಸಿದರು.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಮುಗಿಯದ ವಿದ್ಯುತ್ ಸಮಸ್ಯೆ: ಗ್ರಾಮೀಣ ಭಾಗದಲ್ಲಿ ಹಲವು ದಿನದಿಂದ ವಿದ್ಯುತ್ ನಾಪತ್ತೆ: ಇಂದೂ ಮರ ಬಿದ್ದು ವಿದ್ಯುತ್ ಕಡಿತ:10 ದಿನದಲ್ಲಿ 218 ವಿದ್ಯುತ್ ಕಂಬ ಹಾನಿ
next post
ಮಳೆ ನಿಂತ ಬಳಿಕ ಪಟ ಪಟನೆ ಉದುರುತಿದೆ ಕಾಯಿ ಅಡಿಕೆ: ವ್ಯಾಪಕವಾಗಿ ಕಂಡು ಬಂದಿದೆ ಅಡಿಕೆಗೆ ಕೊಳೆ ರೋಗ ಲಕ್ಷಣ..!

You may also like

ಸುಳ್ಯ ವೃತ್ತ ನಿರೀಕ್ಷಕರಾಗಿ ನವೀನ್ ಚಂದ್ರ ಜೋಗಿ

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಅಂಕಣ:ಹವಾ ವೈವಿಧ್ಯ:ಕರಿಮುಗಿಲ ಬಾನಿಂದ ಧರೆಗಿಳಿದ ಮೇಘಗಳು- ಭೋರ್ಗರೆದ ವರುಣ: ಹಲವೆಡೆ...

May 24, 2023

ಅಂಕಣ-ಹವಾ ವೈವಿಧ್ಯ: ಇರುಳಲ್ಲಿ ಪವನನೊಂದಿಗೆ ಬಂದು ಅಬ್ಬರಿಸಿದ ವರುಣ..!

May 22, 2023

ರಾಜಕೀಯ ಅಂಕಣ-ರಂಗಿ ತರಂಗ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗೆ ಜೈ ಎಂದ...

May 19, 2023

ರಾಜಕೀಯ ಅಂಕಣ-ರಂಗಿ ತರಂಗ: ಕದನ ಕುತೂಹಲಕ್ಕೆ ನಾಳೆ ತೆರೆ: ತೆರೆದುಕೊಳ್ಳಲಿದೆ...

May 12, 2023

ಅಂಕಣ- ಹವಾ ವೈವಿಧ್ಯ:ಆಟ ಆರಂಭಿಸಿದ ವರುಣ

April 27, 2023

ರಾಜಕೀಯ ಅಂಕಣ:ರಂಗಿ ತರಂಗ: ವಾತಾವರಣದಲ್ಲಿ ಬಿಸಿ ಏರಿದ್ದರೂ.. ರಾಜಕೀಯ ರಂಗ...

April 22, 2023

ರಾಜಕೀಯ ಅಂಕಣ:ರಂಗಿ ತರಂಗ: ಮುನಿಸು..ಕಣ್ಣೀರು..ಆಕ್ರೋಶ.. ಸದ್ಯಕ್ಕಂತೂ ಸಜ್ಜಿಗೆ – ಬಜಿಲ್...

April 14, 2023

ರಾಜಕೀಯ ಅಂಕಣ-ರಂಗಿತರಂಗ: ಸುಳ್ಯ ಕ್ಷೇತ್ರಕ್ಕೆ ಯಾರೆಂದು ಬಲ್ಲಿರಿ…ಮತದಾರನ ಮನದಿಂಗಿತವನ್ನು ಅರಿತವರಾರು?

March 31, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ