ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ವೈಭವದಿಂದ ನಡೆಯುತ್ತಿದೆ. ಪ್ರತಿ ದಿನವೂ ನೂರಾರು ಮಂದಿ ಭಕ್ತರು ಆಗಮಿಸಿ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.ಅ.15 ರಂದು ಪಂಜ ವಲಯ ಹವ್ಯಕ ಮಹಿಳೆಯರಿಂದ ಭಜನಾ ಸಂಕೀರ್ತನೆ. ವಿಶ್ವ ಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ ಅಂಡ್ ಕಲ್ಚರ್ ಪುತ್ತೂರು ಇಲ್ಲಿಯ
ವಿದ್ಯಾರ್ಥಿಗಳು ಹಾಗು ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈ ಹಾಗೂ ವಿದುಷಿ, ಸ್ವಸ್ತಿಕ ಆರ್ ಶೆಟ್ಟ ಇವರ ಶಿಷ್ಠೆಯರಾದ ಆರಾಧನಾ ಬಾಬ್ಲುಬೆಟ್ಟು ಹಾಗೂ ಪ್ರಣತಿ ಜೋಗಿಬೆಟ್ಟು ಇವರಿಂದ ಭರತನಾಟ್ಯ’ ಕಲಾ ಸೇವೆ ನಡೆಯಿತು. ರಾತ್ರಿ

ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗೌರವ ಸಲಹೆಗಾರರು,
ಭಕ್ತಾದಿಗಳು ಪಾಲ್ಗೊಂಡಿದ್ದರು.
ಅ.16 ರಂದು ಪಂಜ ವನಿತಾ ಸಮಾಜ ರವರಿಂದ ಭಜನಾ ಸಂಕೀರ್ತನೆ, ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡ ನಾಗತೀರ್ಥ ಇವರಿಂದ ಕುಣಿತ ಭಜನೆ ನಡೆಯಲಿದೆ.











