ಪ್ಯಾರೀಸ್: ಭಾರತದ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್ನ ತನ್ನ ಮೊದಲ ಪಂದ್ಯದಲ್ಲಿ ರೋಚಕ ಗೆಲುವಿನೊಂದಿಗೆ ಅಭಿಯಾನ ಪ್ರಾರಂಭಿಸಿದೆ. ಫ್ರೆಂಚ್ ರಾಜಧಾನಿಯ ಯೆವೆಸ್-ಡು-ಮನೋಯಿರ್ ಸ್ಟೇಡಿಯಂ 2 ರಲ್ಲಿ ಶನಿವಾರ ನಡೆದ ಗುಂಪು ‘ಬಿ’ ಆರಂಭಿಕ ಪಂದ್ಯದಲ್ಲಿ ಹರ್ಮನ್ಪ್ರೀತ್ ಸಿಂಗ್ ಪಡೆ ಅರಂಭದಲ್ಲಿ 0-1 ಅಂತರದ ಹಿನ್ನಡೆ
ಎದುರಿಸಿದರೂ ಅಂತಿಮವಾಗಿ 3-2 ಅಂತರದಿಂದ ಗೆದ್ದುಕೊಂಡಿತು. ಮನ್ದೀಪ್ ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ಗಳಿಸಿದ ಗೋಲುಗಳ ನೆರವಿನಿಂದ ಭಾರತ ಮೇಲುಗೈ ಸಾಧಿಸಿತು.ನಾಯಕ ಹರ್ಮನ್ ಪ್ರೀತ್ ಸಿಂಗ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಗೋಲಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಪುನರಾಗಮನ ಮಾಡಿತು. ಪ್ಯಾರಿಸ್ ಕ್ರೀಡಾಕೂಟದ ನಂತರ ನಿವೃತ್ತಿ ಘೋಷಿಸುವುದಾಗಿ ಘೋಷಿಸಿದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರು ನ್ಯೂಜಿಲೆಂಡ್ ಗೆ 7 ಪೆನಾಲ್ಟಿ ಕಾರ್ನರ್ ಗಳನ್ನು ನಿರಾಕರಿಸಿ ಮಿಂಚಿದರು. ಮುಂದಿನ ಪಂದ್ಯಗಳಲ್ಲಿ ಕಠಿಣ ಸವಾಲು ಎದುರಿಸಬೇಕಾಗಿರುವುದರಿಂದ ಪೂಲ್ ಬಿ ಯ ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ನಿರ್ಣಾಯಕ ಗೆಲುವಾಗಿದೆ.