ಬರ್ಮಿಂಗ್ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆರು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.ನಾಯಕ ಶುಭ್ಮನ್ ಗಿಲ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಅರ್ಧ ಶತಕದ ನೆರವಿನಿಂದ ಭಾರತ ಗೆಲುವಿನ ದಡ ಸೇರಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ
ಇಂಗ್ಲೆಂಡ್ 47.5 ಓವರ್ಗಳಲ್ಲಿ 258 ರನ್ಗೆ ಆಲ್ ಔಟ್ ಆಯಿತು.ಗುರಿ ಬೆನ್ನಟ್ಟಿದ ಭಾರತ ತಂಡವು 45.2 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 262 ರನ್ ಗಳಿಸಿತು. ನಾಯಕ ಶುಭಮನ್ ಗಿಲ್ (80 ರನ್, 75 ಎಸೆತ, 11 ಬೌಂಡರಿ, 1 ಸಿಕ್ಸರ್), ಆಲ್ರೌಂಡರ್ ಅಕ್ಷರ್ ಪಟೇಲ್ (ಔಟಾಗದೆ 57, 52 ಎಸೆತ, 5 ಬೌಂಡರಿ, 1 ಸಿಕ್ಸರ್ ಮತ್ತು 4 ವಿಕೆಟ್) ಹಾಗು ವಾಷಿಂಗ್ಟನ್ ಸುಂದರ್ ಅರ್ಧ ಶತಕದ (ಔಟಾಗದೆ 52, 63 ಎಸೆತ, 4 ಬೌಂಡರಿ, 1 ಸಿಕ್ಸರ್) ಆಟದ ನೆರವಿನಿಂದ ಮೊದಲ ಏಕದಿನ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಐದನೇ ವಿಕೆಟ್ಗೆ 102 ರನ್ ಸೇರಿಸಿ, ಇನ್ನೂ 28 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತ ತಂಡದ ರೋಹಿತ್ ಶರ್ಮಾ (11) ಹಾಗೂ ವಿರಾಟ್ ಕೊಹ್ಲಿ (5) ಅಲ್ಪ ಮೊತ್ತಕ್ಕೆ ಔಟಾದರು. ಗಿಲ್ ಹಾಗೂ ಶ್ರೇಯಸ್ ಅಯ್ಯರ್ (35) ಮೂರನೇ ವಿಕೆಟ್ ಗೆ 101 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಜೋ ರೂಟ್ (ಔಟಾಗದೆ 76, 76 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಲಿಯಾಮ್ ಡಾಸನ್ (68, 83 ಎಸೆತ, 6 ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕಗಳ ಹೊರತಾಗಿಯೂ ಸ್ಪಿನ್ನರ್ ಅಕ್ಷರ್ ಪಟೇಲ್ (4-62) ಅವರ ಸ್ಪಿನ್ ಮೋಡಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 47.5 ಓವರ್ ಗಳಲ್ಲಿ 258 ರನ್ ಗಳಿಸಿ ಆಲೌಟಾಯಿತು.
ಭಾರತದ ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಯಶಸ್ವಿ ಪ್ರದರ್ಶನ ನೀಡಿದರೆ, ಪ್ರಸಿದ್ಧ ಕೃಷ್ಣ (2-50) ಹಾಗೂ ಗುರ್ನೂರ್ ಬ್ರಾರ್ (2-61) ತಲಾ ಎರಡು ವಿಕೆಟ್ ಗಳನ್ನು ಕಬಳಿಸಿ ಇಂಗ್ಲೆಂಡ್ ತಂಡವನ್ನು 258 ರನ್ಗಳಿಗೆ ನಿಯಂತ್ರಿಸಿದರು. ಇನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ (43, 45 ಎಸೆತ) ಹಾಗೂ ಜೇಕಬ್ ಬೆಥೆಲ್ (14, 31 ಎಸೆತ) ಮೊದಲ ವಿಕೆಟ್ ಗೆ 61 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಬೆಥೆಲ್, ಡಕೆಟ್ ಹಾಗೂ ಹ್ಯಾರಿ ಬ್ರೂಕ್ (1) ಜೋಸ್ ಬಟ್ಲರ್ (5) ಸ್ಯಾಮ್ ಕರನ್ ಅಲ್ಪ ಮೊತ್ತಕ್ಕೆ ಔಟಾದರು.
ಒಂದು ಹಂತದಲ್ಲಿ ಇಂಗ್ಲೆಂಡ್ 16.4 ಓವರ್ ಗಳಲ್ಲಿ 80 ರನ್ ಗೆ ಐದನೇ ವಿಕೆಟ್ ಕಳೆದುಕೊಂಡಿತು. ವಿಲ್ ಜಾಕ್ಸ್ 20 ರನ್ ಗಳಿಸಿ ಔಟಾದರು.ಆಗ ಜೊತೆಯಾದ ರೂಟ್ ಹಾಗೂ ಡಾಸನ್ ಏಳನೇ ವಿಕೆಟ್ ಗೆ 121 ರನ್ ಸೇರಿಸಿ ತಂಡವನ್ನು ಆಧರಿಸಿದರು. ಔಟಾಗದೆ 76 ರನ್ ಗಳಿಸಿದ ರೂಟ್ ಅವರು ಇಂಗ್ಲೆಂಡ್ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.







