ಚೆನ್ನೈ: ಪ್ರಬಲ ಇಂಗ್ಲೆಂಡ್ ತಂಡದ ಮೇಲೆ ಸಾಧಿಸಿದ ಅಚ್ಚರಿಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಅಫ್ಗಾನಿಸ್ತಾನ ಹಾಗೂ ಅಜೇಯ ನ್ಯೂಜಿಲೆಂಡ್ ತಂಡ ಬುಧವಾರ ಇಲ್ಲಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.ಆಡಿದ ಮೂರೂ ಪಂದ್ಯಗಳಲ್ಲಿ ಜಯಗಳಿಸಿರುವ ಕಿವೀಸ್ ತಂಡ ಯಶಸ್ಸಿನ ಓಟವನ್ನು ಮುಂದುವರಿಸುವ
ಉಮೇದಿನಲ್ಲಿದೆ. ಇನ್ನೊಂದೆಡೆ ಭಾನುವಾರ ದೆಹಲಿಯಲ್ಲಿ ಇಂಗ್ಲೆಂಡ್ ಮೇಲೆ 69 ರನ್ಗಳ ಜಯ ಪಡೆದ ಅಫ್ಗಾನಿಸ್ತಾನ ಮತ್ತೊಂದು ಅನಿರೀಕ್ಷಿತ ಫಲಿತಾಂಶದ ವಿಶ್ವಾಸದಲ್ಲಿದೆ.
ನ್ಯೂಜಿಲೆಂಡ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ವಿಲ್ ಯಂಗ್, ಡೇರಿಲ್ ಮಿಚೆಲ್, ಡೆವಾನ್ ಕಾನ್ವೆ ಜೊತೆಗೆ ಆಲ್ರೌಂಡ್ ಆಟಗಾರ ರಚಿನ್ ರವೀಂದ್ರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಅಫ್ಗಾನಿಸ್ತಾನ ತಂಡದ ಸ್ಪಿನ್ನರ್ಗಳಾದ ರಶೀದ್ ಖಾನ್, ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಅವರ ಮೇಲೆ ಅಫ್ಗಾನಿಸ್ತಾನ ನಿರೀಕ್ಷೆಯಿಟ್ಟಿದೆ.
ಪಂದ್ಯ ಆರಂಭ:ಮಧ್ಯಾಹ್ನ 2