ಸುಳ್ಯ:ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ನ ವಾರ್ಷಿಕ ಮಹಾಸಭೆ ಜರಗಿತು. ಟ್ರಸ್ಟ್ನ ಅಧ್ಯಕ್ಷೆ ಇಂದಿರಾ ರಾಜಶೇಖರ್ ರೈ ಅಧ್ಯಕ್ಷತೆ ವಹಿಸಿದ್ದರು.ಮಹಾಸಭೆಯ ನೋಟಿಸ್ ಟ್ರಸ್ಟ್ನ ನಿರ್ದೇಶಕಿ ವೀಣಾ ಮೊಂಟೆಡ್ಕ ಓದಿ ದಾಖಲಿಸಿದರು. 2022-23ನೇ ಸಾಲಿನ ವಾರ್ಷಿಕ ವರದಿಯನ್ನು ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ಮಂಡಿಸಿದರು.2022-23ನೇ ಸಾಲಿನ ಲೆಕ್ಕ ಪರಿಶೀಲನಾ ವರದಿಯನ್ನು
ಟ್ರಸ್ಟ್ನ ಖಜಾಂಜಿ ಜಯಂತಿ ಅಜ್ಜಾವರ ಮಂಡಿಸಿದರು. ಟ್ರಸ್ಟ್ನ ಕಾನೂನು ಮತ್ತು ನಿಯಮ ಟ್ರಸ್ಟ್ ಆಕ್ಟ್ ಬಗ್ಗೆ ಸುಳ್ಯದ ಲೆಕ್ಕ ಪರಿಶೋಧಕರಾದ ಗಣೇಶ್ ಭಟ್ ಮಾಹಿತಿ ನೀಡಿದರು. ಟ್ರಸ್ಟ್ನ ವತಿಯಿಂದ ಬಟ್ಟೆ ಕೈ ಚೀಲವನ್ನು ಗಣೇಶ್ ಭಟ್ ಬಿಡುಗಡೆಗೊಳಿಸಿದರು.
” ನಮ್ಮ ಮನೆ ಹಸಿರು ಮನೆ” ಪ್ರಕೃತಿ ರಕ್ಷಣೆಯ ಪ್ರತಿಜ್ಞೆಯನ್ನು ಮಾಡಲಾಯಿತು.ಟ್ರಸ್ಟ್ನ ಸಂಘಟನೆಯ ಬಗ್ಗೆ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಟ್ರಸ್ಟ್ನ ಸಮವಸ್ತ್ರದ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷೆ ಶಶಿಕಲಾ ಹರಪ್ರಸಾದ್ ಉಪಸ್ಥಿತರಿದ್ದರು. ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಪುಷ್ಪಾಮೇದಪ್ಪ ಪ್ರಾರ್ಥಿಸಿದರು. ಟ್ರಸ್ಟ್ ನ ಸಹ ಕೋಶಾಧಿಕಾರಿ ಶಾರದಾ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ ನ ನಿರ್ದೇಶಕರಾದ ಸವಿತಾ ಕಾಯಾರ ಧನ್ಯವಾದ ಸಮರ್ಪಿಸಿದರು. ಟ್ರಸ್ಟ್ನ ಸಹ ಕಾರ್ಯದರ್ಶಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.