ಸುಳ್ಯ:ನಿವೇದಿತಾ ಸಂಚಾಲನ ಸಮಿತಿ ಅಮರ ಪಡ್ನೂರು ಇವರ ವತಿಯಿಂದ ಭಾರತ ಮಾತಾ ಪೂಜಾನ ಕಾರ್ಯಕ್ರಮ ಚೊಕ್ಕಾಡಿ ಮಹಿಳಾ ಹಾಲು ಉತ್ಪಾದಕರ ಕಟ್ಟಡದಲ್ಲಿ ನಡೆಯಿತು. ಸಂಚಾಲನ ಸಮಿತಿಯ ಸಂಚಾಲಕಿ ಗೀತಾ ಕೊರತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕಾರ ಭಾರತೀಯ
ಜಿಲ್ಲಾ ಕಾರ್ಯದರ್ಶಿ ಕುಸುಮಾಧರ ಎ.ಟಿ.ಬೌದ್ಧಿಕ್ ನೀಡಿದರು. ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಇದರ ಆಡಳಿತ ಮಂಡಳಿಯ ಕಾರ್ಯದರ್ಶಿ ಗುಣವತಿ ಕೊಲ್ಲoತ್ತಡ್ಕ ನಿರ್ದೇಶಕರಾದ ವೀಣಾ ಮೊಂಟಡ್ಕ, ಶಶಿಕಲಾ ನಿರಬಿದಿರೆ, ದಿವ್ಯ ಮಡಪ್ಪಾಡಿ ಉಪಸ್ಥಿತರಿದ್ದರು ಚೊಕ್ಕಾಡಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು , ನಿವೇದಿತಾ ಸಂಚಾಲನ ಸಮಿತಿಯ ಸದಸ್ಯರು ,ಮಾತೆಯರು, ಸಹೋದರರು, ಬಾಲಗೋಕುಲದ ಮಕ್ಕಳು ಮತ್ತಿತರಿದ್ದರು ಸಂಚಾಲನ ಸದಸ್ಯೆ ಜಯಶ್ರೀ ಕರ್ಮಜೆ ಪ್ರಾಥನೆ ಗೈದರು ಪಾರ್ವತಿ ನೇಣಾರು ವೆಯುಕ್ತಿಕ ಗೀತೆ ಹೇಳಿದರು.ಮಕ್ಕಳು ದೇಶಭಕ್ತಿಗೀತೆ ಹಾಡಿದರು. ಸಂಚಾಲನ ಸದಸ್ಯೆ ಉಷಾಲತಾ ಪಡ್ಪು ಸ್ವಾಗತಿಸಿ ನಿರೂಪಿಸಿದರು.