ಬೆಂಗಳೂರು: ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ “ಭಾರತ್ ಸಾಕ್ಷರತಾ ಮಿಷನ್” ವತಿಯಿಂದ ನೀಡುವ ನೇಷನ್ ಬಿಲ್ಡರ್ ಅವಾರ್ಡ್ಗೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಆಯ್ಕೆಯಾಗಿದ್ದಾರೆ. ಅ.8ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ
ಪ್ರಶಸ್ತಿಯನ್ನು ಡಾ. ದಾಮ್ಲೆ ಯವರಿಗೆ ನೀಡಿ ಗೌರವಿಸಲಾಯಿತು. ರೋಟರಿ ಸಂಸ್ಥೆಯು ತಾವಾಗಿಯೇ ಸುಳ್ಯದ ಸ್ನೇಹ ಶಾಲೆಯ ಪರಿಸರ ಸಮೃದ್ಧ ಶಿಕ್ಷಣದ ಪ್ರಯೋಗವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ.
ಬೆಂಗಳೂರಿನ ಚಾಮರಾಜ ನಗರದಲ್ಲಿರುವ ಶೃಂಗೇರಿ ಸಭಾಭಾವನದಲ್ಲಿ ನಡೆದ ಇಪ್ಪತ್ತು ರೋಟರಿ ಕ್ಲಬ್ಗಳ ಬೃಹತ್ ಸಮಾವೇಶದಲ್ಲಿ ಮಾಜಿ ಎಂ. ಎಲ್. ಸಿ. ಪುಟ್ಟಣ್ಣ ಟವರು ನೂರು ಶಿಕ್ಷಕ ಶಿಕ್ಷಕಿಯರಿಗೆ “ರಾಷ್ಟ್ರ ನಿರ್ಮಾತೃ”ಗಳೆಂಬ ಪ್ರಶಸ್ತಿಗಳನ್ನು ವಿತರಿಸಿದರು. ಬೆಂಗಳೂರು ವಲಯದ ಹೊರಗಿನಿಂದ ಸ್ನೇಹ ಶಾಲೆಯನ್ನು ಮಾತ್ರ ಗುರುತಿಸಲಾಗಿತ್ತು.