ಸುಬ್ರಹ್ಮಣ್ಯ : ಮಾಜಿ ಪ್ರಧಾನಿ ,ರಾಜ್ಯ ಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಹಾಗೂ ಚೆನ್ನಮ್ಮ ದಂಪತಿ ಅ.9ರಂದು ಬೆಳಿಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಪಡೆಸು ವಿಶೇಷ ಸೇವೆ ಸಲ್ಲಿಸಿದರು.
ಹೆಚ್.ಡಿ.ದೇವೇಗೌಡ ದಂಪತಿ ಅ.8ರಂದು ರಾತ್ರಿ ಬೆಂಗಳೂರಿನಿಂದ
ಮಂಗಳೂರಿಗೆ ವಿಮಾನ ಮೂಲಕ ಬಂದು ಅಲ್ಲಿಂದ ರಸ್ತೆ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡಿ ಅ.9ರಂದು ಪ್ರಾತಃ ಕಾಲ ವಿಶೇಷ ಸೇವೆ ನೆರವೇರಿಸಿದರು.ದೇವೇ ಗೌಡ ದಂಪತಿಗೆ ದೇವಳದ ಆನೆ ಯಶಸ್ವಿ ಆಶೀರ್ವದಿಸಿತು. ದೇವಸ್ಥಾನದ ಶಿಷ್ಟಾಚಾರ ವಿಭಾಗದಿಂದ ಮಾಜಿ ಪ್ರಧಾನಿ ದೇವೇ ಗೌಡ ಅವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಉಪಸ್ಥಿತರಿದ್ದರು