ಸುಳ್ಯ: ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಬಿರುಕು ಬಿಟ್ಟು ಶಿಥಿಲಾವಸ್ಥೆಯಲ್ಲಿದ್ದು ಈ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ ಅವರ ಜೊತೆ ಸಮಾಲೋಚನೆ ನಡೆಸಿದ ಶಾಸಕರು

ದುರಸ್ತಿಗೆ ಶೀಘ್ರ ಕೈಗೊಳ್ಳಲು ಸೂಚನೆ ನೀಡಿದರು. ಕಾಮಗಾರಿ ನಡೆಸಲು ಅನುದಾನಕ್ಕೆ ಶೀಘ್ರ ಅನುಮತಿ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ಅನುದಾನ ಬಂದ ಮೂರು ತಿಂಗಳೊಳಗೆ ಕೆಲಸ ಮಾಡಿ ಮುಗಿಸಬೇಕು ಎಂದು ಸೂಚನೆ ನೀಡಿದರು. ಶಾಲಾ ಮಕ್ಕಳು ಸಣ್ಣ ಕೊಠಡಿಯಲ್ಲಿ ನೆಲದಲ್ಲಿ ಕುಳಿತಿರುವುದನ್ನು ಗಮನಿಸಿದ ಶಾಸಕರು ಮಕ್ಕಳಿಗೆ ಮ್ಯಾಟ್ ವ್ಯವಸ್ಥೆ ಕಲ್ಪಿಸುವಂತೆ ಹೇಳಿದರು. ಈ ವೇಳೆ ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಮಾಜಿ ಸದಸ್ಯೆ ರೇವತಿ ದೊಡ್ಡೇರಿ, ಜಗದೀಶ್ ದೊಡ್ಡೇರಿ, ಮಹೇಶ್ ರೈ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ಮುಳ್ಯ ಅಟ್ಲೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು, ವಾಸುದೇವ ನಾಯ್ಕ್, ಹರ್ಷಿತ್ ದೊಡ್ಡೇರಿ ಮೊದಲಾದವರು ಇದ್ದರು.