ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸುಳ್ಯ ತಾಲೂಕು ಪಂಚಾಯತ್ನ ಶಾಸಕರ ಕಛೇರಿಯಲ್ಲಿ ಅವರು ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು
ಸ್ವೀಕರಿಸಿದರು.ಸಾರ್ವಜನಿಕರು ವಿವಿಧ ಬೇಡಿಕೆಗಳ ಅಹವಾಲು ಸಲ್ಲಿಸಿದರು. ಅಕ್ರಮ ಸಕ್ರಮ, ಗ್ರಾಮೀಣ ರಸ್ತೆಗೆ ಅನುದಾನ ಹಾಗೂ ಮತ್ತಿತರ ಸಾರ್ವಜನಿಕ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು. ವಿವಿಧ ವೈಯುಕ್ತಿಕ ಬೇಡಿಕೆಗಳ ಬಗ್ಗೆಯೂ ಮನವಿ ಸಲ್ಲಿಸಿದರು. ನಂತರ ಮನವಿ ಪರಿಶೀಲಿಸಿ ಆದಷ್ಟು ಶೀಘ್ರವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಸರಿಪಡಿಸಿಕೊಡಬೇಕಾಗಿ ಅಧಿಕಾರಿಗಳಿಗೆ ಸೂಚಿಸಿದರು.