ಸುಳ್ಯ: ಸುಳ್ಯ ಮಂಡಲ ಪಂಚಾಯತ್ ಮಾಜಿ ಮಂಡಲ ಪ್ರಧಾನ ದಿ. ಎಂ.ಬಾಲಕೃಷ್ಣ ಗೌಡ ಅವರ ಪತ್ನಿ ಎಂ.ಬಿ.ದೇವಕಿ ಅವರು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಪಾರ್ಥಿವ ಶರೀರವನ್ನು ಈಗ ಮನೆಯಲ್ಲಿ ಇರಿಸಲಾಗಿದೆ. ನೂರಾರು ಮಂದಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.ಮೃತರು ಪುತ್ರರಾದ ಎಂ.ಬಿ. ಜಯರಾಮ, ಎಂ.ಬಿ.ಪ್ರಭಾಕರ, ಎಂ.ಬಿ.ಸದಾಶಿವ, ಪುತ್ರಿ ಸವಿತಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.