ಲಖನೌ: ಇಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 21 ರನ್ಗಳ ಗೆಲುವು ದಾಖಲಿಸಿದೆ. ಪಂದ್ಯಾವಳಿಯಲ್ಲಿ ಇದು ಲಖನೌ ತಂಡದ ಮೊದಲ ಗೆಲುವಾಗಿದೆ.ಲಖನೌ ನೀಡಿದ್ದ 200 ರನ್ ಗುರಿ ಬೆನ್ನತ್ತಿದ್ದ ಪಂಜಾಬ್ 20 ಓವರ್ಗಳಲ್ಲಿ
5 ವಿಕೆಟ್ ಕಳೆದುಕೊಂಡು 178 ರನ್ ಗಳಿಸಲಷ್ಟೇ ಶಕ್ತವಾಯಿತು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 8ಕ್ಕೆ199 ರನ್ ಗಳಿಸಿತು.
ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರ 54, ನಿಕೊಲಸ್ ಪೂರನ್ ಗಳಿಸಿದ 42 ಮತ್ತು ಕ್ರುನಾಲ್ ಪಾಂಡ್ಯ ಅಜೇಯ 43 ರನ್ ನೆರವಿನಿಂದ 199 ರನ್ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು. ಪಂಜಾಬ್ ಪರ ಸ್ಯಾಮ್ ಕರನ್ 3 ವಿಕೆಟ್ ಪಡೆದರು.ಸವಾಲಿನ ಮೊತ್ತ ಬೆನ್ನತ್ತಿದ ಪಂಜಾಬ್ಗೆ ನಾಯಕ ಶಿಖರ್ ಧವನ್ 72 ಮತ್ತು ಜಾನಿ ಬೆಸ್ಟೋ 42 ರನ್ ಸಿಡಿಸಿ ಉತ್ತಮ ಆರಂಭ ನೀಡಿದರಾದರೂ ನಂತರ ಬಂದ ಬ್ಯಾಟರ್ ಅದನ್ನು ಮುಂದುವರಿಸಲು ವಿಫಲವಾಗಿದ್ದರಿಂದ ತಂಡಕ್ಕೆ ಸೋಲಾಯಿತು.