ನವದೆಹಲಿ:ಶುಕ್ರವಾರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಶೇ 60ಕ್ಕೂ ಅಧಿಕ ಪ್ರಮಾಣದ ಮತದಾನವಾಗಿದೆ.
ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಶುಕ್ರವಾರ ಸಂಜೆ 7 ಗಂಟೆ ಹೊತ್ತಿಗೆ ಲಭ್ಯವಾಗಿರುವ ಮಾಹಿತಿಯಂತೆ, ಶೇ 60.03ರಷ್ಟು ಮತದಾನವಾಗಿದ್ದು, ಚಲಾವಣೆಯಾದ ಮತಗಳ ಕುರಿತು ಶನಿವಾರ ಅಂತಿಮ ಅಂಕಿ–ಅಂಶ ಸಿಗಲಿದೆ ಎಂದು
ಚುನಾವಣಾ ಆಯೋಗ ತಿಳಿಸಿದೆ.ಗರಿಷ್ಠ ಶೇ 79.90ರಷ್ಟು ಮತದಾನ ತ್ರಿಪುರಾದಲ್ಲಿ ಆಗಿದ್ದರೆ, ಅತ್ಯಂತ ಕನಿಷ್ಠ ಶೇ 47.49ರಷ್ಟು ಮತದಾನ ಬಿಹಾರದಲ್ಲಿ ಆಗಿದೆ.
ಹಲವೆಡೆ ಮತದಾನ ಪ್ರಕ್ರಿಯೆ ಆರಂಭಗೊಂಡ ಕೆಲ ಹೊತ್ತಿನಲ್ಲಿಯೇ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದೋಷ ಕಂಡುಬಂದ ಘಟನೆಗಳು ವರದಿಯಾಗಿವೆ. ಪಟ್ಟಿಯಲ್ಲಿ ತಮ್ಮ ಹೆಸರುಗಳು ಇಲ್ಲದಿರುವ ಬಗ್ಗೆಯೂ ಕೆಲವೆಡೆ ಮತದಾರರು ಆಕ್ಷೇಪ ವ್ಯಕ್ತಪಡಿಸಿದರು. ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದರೂ, ಮತ ಚಲಾಯಿಸಲು ಜನರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ, ಸರದಿಯಲ್ಲಿ ಇದ್ದವರಿಗೆಲ್ಲ ತಮ್ಮ ಹಕ್ಕು ಚಲಾವಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಆಯೋಗ ತಿಳಿಸಿದೆ. ಕೆಲವೆಡೆ ಹಿಂಸಾಚಾರಗಳು ನಡೆದಿದೆ. ಅಂಡಮಾನ್ ನಿಕೋಬಾರ್– ಶೇ 56.87, ಅರುಣಾಚಲಪ್ರದೇಶ ಶೇ 65.46,
ಅಸ್ಸಾಂ– ಶೇ 71.38
ಚತ್ತೀಸಗಢ–ಶೇ 63.41
ಜಮ್ಮು ಮತ್ತು ಕಾಶ್ಮೀರ– ಶೇ 65.08
ಲಕ್ಷದ್ವೀಪ– ಶೇ 59.02
ಮಧ್ಯಪ್ರದೇಶ– ಶೇ 55.29
ಮಹಾರಾಷ್ಟ್ರ– ಶೇ 55.29
ಮಣಿಪುರ– ಶೇ 68.62
ಮೇಘಾಲಯ– ಶೇ 70.26
ಮಿಜೋರಾಂ– ಶೇ 54.18
ನಾಗಾಲ್ಯಾಂಡ್– ಶೇ 56.77
ಪುದುಚೇರಿ– ಶೇ 73.25
ರಾಜಸ್ಥಾನ– ಶೇ 50.95
ಸಿಕ್ಕಿಂ– ಶೇ 68.06
ತಮಿಳುನಾಡು– ಶೇ 62.19