ಸುಳ್ಯ:ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕನಕಮಜಲು ಸಮೀಪ ಸುಣ್ಣಮೂಲೆ ಬಳಿ ಬೃಹತ್ ಗಾತ್ರದ ಮರವೊಂದು ಬಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ವಾಹನ ಸಂಚಾರ
ಬಂದ್ ಆಗಿದ್ದು ಇದರಿಂದ ಎರಡೂ ಬದಿಯಲ್ಲಿ ವಾಹನಗಳ ಸಾಲು ಕಂಡು ಬಂದಿತ್ತು. ಮರ ಬಿದ್ದ ಕಾರಣ ವಿದ್ಯುತ್ ಕಂಬಕ್ಕೆ ಮತ್ತು 33 ಕೆವಿ ವಿದ್ಯುತ್ ಲೈನ್ಗೆ ಹಾನಿ ಉಂಟಾಗಿದೆ. ಇದರಿಂದ ಸುಳ್ಯಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ರಾತ್ರಿ ಮಳೆ ಗಾಳಿ ಉಂಟಾಗಿದ್ದು ಈ ಸಂದರ್ಭದಲ್ಲಿ ಮರ ಧರೆಗುರುಳಿದೆ ಎಂದು ತಿಳಿದು ಬಂದಿದೆ. ಮರ ತೆರವು ಕಾರ್ಯಾಚರಣೆ ಮತ್ತು ವಿದ್ಯುತ್ ಸಂಪರ್ಕ ಸರಿಪಡಿಸುವ ಕೆಲಸ ನಡೆಸಲಾಗುತಿದೆ ಎಂದು ತಿಳಿದು ಬಂದಿದೆ