ಸುಳ್ಯ: ಸುಳ್ಯ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಲಯನ್ಸ್ ಪ್ರಾಂತೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ಸುಳ್ಯ ಅಮೃತ ಭವನದಲ್ಲಿ ನಡೆಯಿತು. ಲಯನ್ಸ್ ಪ್ರಾಂತ್ಯದ ವಿವಿಧ ಕ್ಲಬ್ಗಳು ಪಂದ್ಯಾಟದಲ್ಲಿ
ಭಾಗವಹಿಸಿದ್ದವು. ಡಾ.ಸೋಮಶೇಖರ್ ರೈ, ಜಗನ್ನಾಥ ರೈ, ಜಯಂತ ಶೆಟ್ಟಿ ಸ್ಮರಣಾರ್ಥ ನಡೆದ ಪಂದ್ಯಾಟವನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷ ರೇಣುಕಾ ಸದಾನಂದ ಜಾಕೆ ಉದ್ಘಾಟಿಸಿದರು. ಪಂದ್ಯಾಟದ ಸಂಯೋಜಕರಾದ ಎನ್.ಜಯಪ್ರಕಾಶ್ ರೈ, ಅವಿನ್ ಪಡ್ಡಂಬೈಲು, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ, ಎಂ.ಬಾಲಚಂದ್ರ ಗೌಡ, ನಮಿತಾ ರೈ, ಜಯಂತಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.