ಸುಳ್ಯ: ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಇದರ ಸಹಯೋಗದಲ್ಲಿ ರೀಸರ್ಚ್ ಗ್ರಾಂಟ್ಸ್ & ಪೇಟೆಂಟ್ಸ್ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ಇಚಿಜಿನಿಯರಿಂಗ್ ಕಾಲೇಜಿನ ಅಡಿಟೋರಿಯಂನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾದ ವಿ.ವಿ.ಸಿ.ಇ., ಮೈಸೂರು ಡೀನ್ ರೀಸರ್ಚ್ & ಡೆವೆಲಪ್ಮೆಂಟ್, ಪ್ರೊಫೆಸರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪಾರ್ಟ್ಮೆಂಟ್ ಡಾ. ಜಿ.ಬಿ. ಕೃಷ್ಣಪ್ಪ ಇವರು
ಇವರು ಸಂಶೋಧನಾ ವಿದ್ವಾಂಸರು, ಪದವಿ ಮತ್ತು ಸ್ನಾತಕೋತ್ತರ
ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು. ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ಹಾಗೂ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯಸ್ಥರು ಕೆ.ವಿ.ಜಿ.ಡಿ.ಸಿ ಪಿ.ಹೆಚ್.ಡಿ ಹಾಗೂ ರೀಸರ್ಚ್ & ಡೆವಲಪ್ಮೆಂಟ್ ವಿಭಾಗ ಮುಖ್ಯಸ್ಥರಾದ ಡಾ. ನಸ್ರತ್ ಫರೀದ್ ಸ್ವಾಗತಿಸಿದರು. ಕೆ.ವಿ.ಜಿ.ಡಿ.ಸಿ. ಯ ಡಾ. ನವೀನ್,ಅತಿಥಿಯನ್ನು ಪರಿಚಯಿಸಿದರು. ಕೆ.ವಿ.ಜಿ.ಸಿ.ಇಯ ಡೀನ್-ರೀಸರ್ಚ್ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್
ಡಾ. ಸವಿತಾ ಸಿ.ಕೆ., ಧನ್ಯವಾದ ಸಮರ್ಪಿಸಿದರು. ಡಾ. ಆಕಾಶ್ ಮೇದಪ್ಪ, ಕೆ.ವಿ.ಜಿ.ಡಿ.ಸಿ ಇವರು ಕಾರ್ಯಕ್ರಮ ನಿರೂಪಿಸಿದರು. ಇದೇ ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಕೃಷ್ಣಪ್ಪ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕ ವೃಂದ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.