ಸುಳ್ಯ:ನೋಟಾಕ್ಕೆ ಮತ ಚಲಾಯಿಸುವದರಿಂದ ನಷ್ಟವೇ ಹೊರತು ಯಾವುದೇ ಲಾಭ ಇಲ್ಲ. ನೋಟಾದ ಬದಲು ಕೆಆರ್ ಎಸ್ ಅಭ್ಯರ್ಥಿಗೆ ಮತ ನೀಡಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಪಿರೇರಾ ಹೇಳಿದರು. ಸುಳ್ಯದಲ್ಲಿ ಸುದ್ದಿ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನೋಟಾ ಮತದಾನ ದಿಂದ
ಮತ್ತೆ ಚುನಾವಣೆ ನಡೆದು ಖರ್ಚಿಗೆ ದಾರಿಯಾಗುತ್ತದೆ. ಇದರಿಂದ ನೋಟಾ ಅಭಿಯಾನ ಬಿಟ್ಟು ಕೆಆರ್ಎಸ್ ಪಕ್ಷದ ಸಮರ್ಥ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಹೇಳಿದರು. ಕರ್ನಾಟಕದಲ್ಲಿ ಪ್ರಮಾಣಿಕ ಜನಪರ ರಾಜಕಾರಣವನ್ನು ಸ್ಥಾಪಿಸಲು ಕೆಆರ್ಎಸ್ ಪಕ್ಷ ಕಳೆದ 5 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನು ಸರಕಾರಿ ಸಂಸ್ಥೆಯಲ್ಲಿ ನೀಡುವ ಮೂಲಕ ಸಾಮಾಜಿಕ ಸಮಾನತೆ ಕಲ್ಪಿಸುವುದು. ಪರಿಸರ ಮತ್ತು ಆರೋಗ್ಯಕ್ಕೆ ಮಾರಕವಾಗುವ ಕೈಗಾರಿಕೆಗಳಿಗೆ ಪರವಾನಿಗೆ ನೀಡದೇ ಪರಿಸರ ಸಂರಕ್ಷಣೆಗರ ಒತ್ತು ನೀಡುವುದು. ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ದರ ಕಲ್ಪಿಸುವ ಮೂಲಕ ಆಧುನಿಕ ಕೃಷಿಗೆ ಒತ್ತು ನೀಡಲಾಗುವುದು ಎಂದರು.
ರಾಜ್ಯ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು. ಸರಕಾರಿ ಶಾಲೆಗಳಲ್ಲಿ ಉನ್ನತ ಮಟ್ಟದ ಶಿಕ್ಷಣ ಕಲ್ಪಿಸುವುದು. ರಾಜ್ಯದಲ್ಲಿ ನಡೆಯುತ್ತಿರುವ ಮರಳು ದಂಧೆಗೆ ಮುಕ್ತಿ. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವುದೇ ಪಕ್ಷದ ಉದ್ದೇಶ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕೆಆರ್ ಎಸ್ ಪಕ್ಷದ ಲೋಕಸಭಾ ಅಭ್ಯರ್ಥಿ ರಂಜಿನಿ. ಎಂ. ಜಿಲ್ಲಾಧ್ಯಕ್ಷ ವೇಣುಗೋಪಾಲ್,ಮುಖಂಡರಾದ ಸುನೀತಾ ರೊಸೋರಿಯ, ಉಪಾಧ್ಯಕ್ಷ ಐವನ್ ಫೆರಾವೋ, ಜಿಲ್ಲಾ ಕಾರ್ಯದರ್ಶಿ ಸಿಮಿ ಉಪಸ್ಥಿತರಿದ್ದರು.