ಸುಳ್ಯ: ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಮೇ.6 ರಂದು ಪಂಜ, ನಿಂತಿಲ್ಲು, ಬೆಳ್ಳಾರೆ ಮೊದಲಾದ ಕಡೆಗಳಲ್ಲಿ ಮತದಾರರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿ ಪ್ರಚಾರ ನಡೆಸಿದರು. ಬಿರು ಬಿಸಿಲು ಮತ್ತು ಏರಿದ ಉಷ್ಣಾಂಶದ ಮಧ್ಯೆ ಕೃಷ್ಣಪ್ಪ ಹಾಗು ಮುಖಂಡರು ದಾರಿ ಮದ್ಯೆ ಪಾಜಾಪಳ್ಳದಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುವ ವೇಳೆ ಗೇರು ಹಣ್ಣು ಸವಿದು ರಿಲ್ಯಾಕ್ಸ್ ಆದರು. ಈ ಸಂದರ್ಭದಲ್ಲಿ ಕ್ಷೇತ್ರ ಚುನಾವಣಾ ಉಸ್ತುವಾರಿ ಎಂ. ವೆಂಕಪ್ಪ ಗೌಡ, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಸದಾನoದ ಮಾವಜಿ, ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಾಫ ಜತೆಗಿದ್ದರು.