ಪುಣೆ: ಐಸಿಸಿ ಏಕದಿನ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಗ್ರ ಆಸ್ಥಾನಕ್ಕೇರಿದ್ದಾರೆ. ಅಗ್ರ ಸ್ಥಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿರಾಟ್ ಕೊಹ್ಲಿ 5 ಪಂದ್ಯಗಳಲ್ಲಿ
354 ರನ್ ಗಳಿಸಿದ್ದಾರೆ. ಒಂದು ಶತಕ 3 ಅರ್ಧ ಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಶತಕ(103) ಬಾರಿಸಿದ್ದ ಕೊಹ್ಲಿ ನ್ಯೂಝಿಲೆಂಡ್ ವಿರುದ್ಧ 95 ರನ್, ಆಸ್ಟ್ರೇಲಿಯಾ ವಿರುದ್ಧ 85 ರನ್, ಅಫ್ಘಾನಿಸ್ತಾನ ವಿರುದ್ಧ 55, ಪಾಕಿಸ್ತಾನದ ವಿರುದ್ಧ 16 ರನ್ ಗಳಿಸಿದ್ದರು.
ರೋಹಿತ್ ಶರ್ಮ 5 ಪಂದ್ಯಗಳಿಂದ 311 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ರೋಹಿತ್ ಬಳಿಕ ಅಫ್ಗಾನಿಸ್ತಾನ ವಿರುದ್ಧ ಭರ್ಜರಿ ಶತಕ (131) ಗಳಿಸಿದ್ದರು. ಪಾಕಿಸ್ತಾನ ವಿರುದ್ಧ 86, ಬಾಂಗ್ಲಾದೇಶ ವಿರುದ್ಧ 48, ನ್ಯೂಝಿಲೆಂಡ್ ವಿರುದ್ಧ 46 ರನ್ ಬಾರಿಸಿದ್ದರು. ಪಾಕಿಸ್ತಾನದ
ಮೊಹಮ್ಮದ್ ರಿಜ್ವಾನ್ 4 ಪಂದ್ಯದಲ್ಲಿ 294 ರನ್ ಗಳಿಸಿದ್ದಾರೆ.
ನ್ಯೂಝಿಲೆಂಡ್ನ ರಚಿನ್ ರವೀಂದ್ರ 5 ಪಂದ್ಯಗಳಲ್ಲಿ 290, ಡ್ಯಾರೆಲ್ ಮಿಚೆಲ್ 268,
ಡೆವೊನ್ ಕಾನ್ವೆ 249 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ 4 ಪಂದ್ಯದಲ್ಲಿ 233 ರನ್ ಬಾರಿಸಿದ್ದಾರೆ.