ಸುಳ್ಯ:ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ನ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪೋಲೀಸ್ ಇಲಾಖೆಯ ವತಿಯಿಂದ ಕಾನೂನು ಮಾಹಿತಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸುಳ್ಯ ಪೋಲಿಸ್ ಠಾಣೆಯ
ಅಪರಾಧ ನಿಗ್ರಹ ವಿಭಾಗದ ಪೋಲಿಸ್ ಉಪ ನಿರೀಕ್ಷಕಿ ಸರಸ್ವತಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಫೋಕ್ಸೊ ಕಾಯಿದೆ, ಮೋಟಾರು ವಾಹನ ಕಾಯಿದೆ, ಮಾದಕ ದ್ಯವ್ಯದ ದುಷ್ಪರಿಣಾಮಗಳು ಮತ್ತು ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ, ಸುನಿಲ್ ಕುಮಾರ್ ಎನ್.ಪಿ, ಐ.ಎಸ್.ಟಿ.ಇ ಘಟಕದ ಸಂಚಾಲಕ ಫಾಲಚಂದ್ರ ವೈ.ವಿ, ಸಾಮಾನ್ಯ ವಿಭಾಗದ ಮುಖ್ಯಸ್ಥೆ ಬಿಂದು ಕೆ.ವಿ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು, ಐ.ಕ್ಯು.ಎ.ಸಿ ಸಂಚಾಲಕ ವಿವೇಕ್ ಪಿ ಸ್ವಾಗತಿಸಿ, ಅಕಾಡೆಮಿಕ್ ಡೀನ್ ಚಂದ್ರಶೇಖರ ಎಮ್.ಎನ್ .ವಂದಿಸಿದರು.