ಸುಳ್ಯ: ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನವಾದ ಮೇ.8 ರಂದು ಆಮ್ ಆದ್ಮಿ ಪಾರ್ಟಿ ವತಿಯಿಂದ ಕ್ಷೇತ್ರದಾದ್ಯಂತ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ತೆರೆದ ವಾಹನದಲ್ಲಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಹಾಗು ಮುಖಂಡರು ಸಂಚರಿಸಿ ಮತದಾರರನ್ನು
ಭೇಟಿ ಮಾಡುತ್ತಿದ್ದಾರೆ. ಸುಳ್ಯ ನಗರದಲ್ಲಿ ತೆರೆದ ವಾಹನದಲ್ಲಿ ಅಭ್ಯರ್ಥಿ ಪ್ರಯಾಣಿಸಿ ಮತದಾರರನ್ನು, ಸಾರ್ವಜನಿಕರನ್ನು ಕೈ ಮುಗಿದು ಮತ ಚಲಾಯಿಸುವಂತೆ ವಿನಂತಿಸಿದರು. ಹಲವಾರು ವಾಹನಗಳು ಪ್ರಚಾರ ವಾಹನಕ್ಕೆ ಸಾಥ್ ನೀಡಿದವು.
ಇಂದು ಬೆಳಿಗ್ಗೆ ಸಂಪಾಜೆಯಿಂದ ಆರಂಭಗೊಂಡ ರೋಡ್ ಶೋ ಕಲ್ಲುಗುಂಡಿ, ಅರಂತೋಡು, ಸುಳ್ಯ, ಪೈಚಾರು, ಸೋಣಂಗೇರಿ, ಗುತ್ತಿಗಾರು, ಸುಬ್ರಹ್ಮಣ್ಯ, ಕಡಬ, ಅಲಂಕಾರು, ಕಡಬ, ಪಂಜ, ನಿಂತಿಕಲ್ಲು, ಕಾಣಿಯೂರು, ಬೆಳಂದೂರು, ಸವಣೂರು, ಪೆರುವಾಜೆ, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ ಸೇರಿದಂತೆ ಕ್ಷೇತ್ರದಾದ್ಯಂತ ಸಂಚರಿಸಿ ಸಂಚಲನ ಮೂಡಿಸಿತು. ಸುಳ್ಯ ವಿಧಾನಸಭಾ ಸಮಿತಿ, ಜಿಲ್ಲೆ ಹಾಗು ರಾಜ್ಯ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.