ಜೈಪುರ: ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ 112 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಜಯದೊಂದಿಗೆ ಆರ್ಸಿಬಿಯ ಪ್ಲೇ ಆಫ್ ಪ್ರವೇಶ ನಿರೀಕ್ಷೆ ಜೀವಂತವಾಗಿದೆ. ಟಾಸ್ ಜಯಿಸಿದ ಆರ್ಸಿಬಿ ಮೊದಲು ಬ್ಯಾಟಿಂಗ್
ಆಯ್ದುಕೊಂಡಿತು. ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ನಾಯಕ ಎಫ್ಡು ಪ್ಲೆಸಿಸ್(55 ರನ್, 44 ಎಸೆತ) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(54 ರನ್, 33 ಎಸೆತ)ಅರ್ಧಶತಕದ ಕೊಡುಗೆ ನೀಡಿದರು. ಅನೂಜ್ ರಾವತ್ ಕೊನೆಯಲ್ಲಿ 11 ಎಸೆತಗಳಳಲ್ಲಿ 29 ರನ್ ಸಿಡಿಸಿದರು. ಗೆಲ್ಲಲು 172 ರನ್ ಗುರಿ ಬೆನ್ನಟ್ಟಿದ ಆತಿಥೇಯ ರಾಜಸ್ಥಾನ ತಂಡ ವೇಯ್ನಾ ಪಾರ್ನೆಲ್(3-10), ಮೈಕಲ್ ಬ್ರೆಸ್ವೆಲ್(2-16) ಹಾಗೂ ಕರ್ಣ್ ಶರ್ಮಾ (2-19)ದಾಳಿಗೆ ತತ್ತರಿಸಿ 10.3 ಓವರ್ಗಳಲ್ಲಿ ಕೇವಲ 59 ರನ್ಗೆ ಆಲೌಟಾಯಿತು. ರಾಜಸ್ಥಾನದ ಪರ ಶಿಮ್ರಾನ್ ಹೆಟ್ಮೆಯರ್(35 ರನ್, 19 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ರನ್ ಖಾತೆ ತೆರೆಯುವಲ್ಲಿ ವಿಫಲವಾದರು.ನಾಯಕ ಸಂಜು ಸ್ಯಾಮ್ಸನ್, ಜೋ ರೂಟ್ ಸೇರಿ ಎಲ್ಲಾ ಆಟಗಾರರು ಬೇಗನೇ ಮರಳಿದರು.