ಅಹಮದಾಬಾದ್: ಫೈನಲ್ ಪಂದ್ಯದಲ್ಲಿ ರೋಚಕ ಜಯದೊಂದಿಗೆ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸತತ ಎರಡನೇ ಪ್ರಶಸ್ತಿ ಗೆಲ್ಲುವ ಗುಜರಾತ್ ಟೈಟನ್ಸ್ ತಂಡದ ಕನಸು ಕಮರಿತು.ಸೋಮವಾರ ತಡರಾತ್ರಿ ಮುಕ್ತಾಯವಾದ ಫೈನಲ್ನಲ್ಲಿ ತಂಡವು 5 ವಿಕೆಟ್ಗಳ ರೋಚಕ ಜಯ
ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಮಳೆ ಸುರಿದ ಕಾರಣ ಪರಿಷ್ಕತ ಗೊಂಡು 15 ಓವರ್ಗಳಲ್ಲಿ 171 ರನ್ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡಕ್ಕೆ ಕೊನೆಯ ಓವರ್ನಲ್ಲಿ 13 ರನ್ ಅಗತ್ಯ ಇತ್ತು. ಬಿಗು ಬೌಲಿಂಗ್ ನಡೆಸಿದ ಮೋಹಿತ್ ಶರ್ಮ 4 ಎಸೆತಗಳಲ್ಲಿ ಕೇವಲ 3 ರನ್ ನೀಡಿದರು. ಇದರಿಂದ ಕೊನೆತ ಎರಡು ಎಸೆತಗಳಲ್ಲಿ 10 ರನ್ಗಳ ಅಗತ್ಯ ಇತ್ತು.
ರವೀಂದ್ರ ಜಡೇಜ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿಸರು.ಉಸಿರು ಬಿಗಿಹಿಡಿದು ಕುಳಿತಿದ್ದ
ಚೆನ್ನೈ ಅಭಿಮಾನಿಗಳು ಸಂಭ್ರಮದಿಂದ ಪುಟಿದೆದ್ದರು. ಚೆನ್ನೈ ತಂಡವು ಐದನೇ ಬಾರಿ ಪ್ರಶಸ್ತಿ ಗೆದ್ದಿತು. ಚೆನ್ನೈ ತಂಡದ ಆಟಗಾರರು ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಡೆವನ್ ಕಾನ್ವೆ 25 ಎಸೆತಗಳಲ್ಲಿ47, ಋತುರಾಜ್ ಗಾಯಕ್ವಾಡ್ 16 ಎಸೆತಗಳಲ್ಲಿ26, ಅಜಿಂಕ್ಯ ರಹಾನೆ 13 ಎಸೆತಗಳಲ್ಲಿ 27, ಅಂಬಟಿ ರಾಯಿಡು 8 ಎಸೆತಗಳಲ್ಲಿ 19, ಶಿವಂ ದುಬೆ 21 ಎಸೆತಗಳಲ್ಲಿ 32 ರನ್ ಬಾರಿಸಿದರು. ಗುಜರಾತ್ ತಂಡದ ಮೋಹಿತ್ ಶರ್ಮಾ (36ಕ್ಕೆ3) ಹಾಗೂ ಸಾಯಿ ಸುದರ್ಶನ್ (96 ರನ್) ಅವರ ಪ್ರಯತ್ನ ವ್ಯರ್ಥವಾಯಿತು. ನಾಲ್ಕು ರನ್ಗಳ ಅಂತರದಿಂದ
ಶತಕ ತಪ್ಪಿಸಿಕೊಂಡ ಸಾಯಿ ಸುದರ್ಶನ್(96)
ಗುಜರಾತ್ ಟೈಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 214 ರನ್ಗಳ ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನಿಂಗ್ಸ್ನಲ್ಲಿ ಮೊದಲ ಓವರ್ ಮೂರು ಎಸೆತಗಳು ಆದಾಗ ಮಳೆ ಸುರಿಯಲು ಆರಂಭಿಸಿತು. ಇದರಿಂದಾಗಿ ಗುರಿಯನ್ನು ಪರಿಷ್ಕರಿಸಲಾಯಿತು. ಆರಂಭಿಕ ಜೋಡಿ ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ 6.3 ಓವರ್ಗಳಲ್ಲಿ 74 ರನ್ ಸೇರಿಸಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ವೃದ್ಧಿಮಾನ್ ಸಹಾ 39 ಎಸೆತಗಳಲ್ಲಿ 54( 4X5, 6X1) ಸಾಯಿ ಸುದರ್ಶನ್ ಆರು ಸಿಕ್ಸರ್ ಹಾಗೂ ಎಂಟು ಬೌಂಡರಿ ನೆರವಿನಿಂದ 47 ಎಸೆತಗಳಲ್ಲಿ 96 ರನ್ ಬಾರಿಸಿದರು.
ಐಪಿಎಲ್ನಲ್ಲಿ 11 ಫೈನಲ್ ಪಂದ್ಯಗಳನ್ನು ಆಡಿರುವ ಮಹೇಂದ್ರಸಿಂಗ್ ಧೋನಿ 5ನೇ ಬಾರಿ ಕಪ್ ಎತ್ತಿದರು.
ಕಳೆದ ಆವೃತ್ತಿಯ ಚಾಂಪಿಯನ್ ಗುಜರಾತ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಎಡವಿತು. ಆದರೆ, ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದವರಿಗೆ ನೀಡುವ ‘ಆರೆಂಜ್ ಕ್ಯಾಪ್’ ಮತ್ತು ಹೆಚ್ಚು ವಿಕೆಟ್ ಕಬಳಿಸಿದವರಿಗೆ ಕೊಡುವ ‘ಪರ್ಪಲ್ ಕ್ಯಾಪ್’ ಈ ತಂಡದ ಆಟಗಾರರ ಪಾಲಾದವು.
ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಭರವಸೆಯ ಬ್ಯಾಟರ್ ಶುಭಮನ್ ಗಿಲ್ ‘ಆರೆಂಜ್ ಕ್ಯಾಪ್’ ಮತ್ತು ಅತಿಹೆಚ್ಚು ಕಬಳಿಸಿದ ಸಾಧನೆ ಮಾಡಿದ ಮೊಹಮ್ಮದ್ ಶಮಿ ‘ಪರ್ಪಲ್ ಕ್ಯಾಪ್’ ತೊಟ್ಟರು.ಗಿಲ್ 17 ಪಂದ್ಯಗಳ 17 ಇನಿಂಗ್ಸ್ಗಳಿಂದ ಮೂರು ಶತಕ ಸಹಿತ 890 ರನ್ ಕಲೆಹಾಕಿದ್ದಾರೆ. ಶಮಿ ಅವರೂ ಇಷ್ಟೇ ಪಂದ್ಯಗಳಿಂದ 28 ವಿಕೆಟ್ ಉರುಳಿಸಿದ್ದಾರೆ.