ಸುಬ್ರಮಣ್ಯ: ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬೆಂಬಲಿತರು 7 ಸ್ಥಾನ ಮತ್ತು ಕಾಂಗ್ರೆಸ್ 5 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಸಾಮಾನ್ಯ ಸ್ಥಾನದಿಂದ
ಮೈತ್ರಿ ತಂಡದ ಜಯಪ್ರಕಾಶ್ ಕೂಜುಗೋಡು,ವೆಂಕಟೇಶ್ ಎಚ್.ಎಲ್., ಕಿರಣ್ ಪೈಲಾಜೆ, ಯಶೋದಕೃಷ್ಣ ಕಿಟ್ಟ ನೂಚಿಲ,ಹಾಗು ಕಾಂಗ್ರೆಸ್ ಬೆಂಬಲಿತರಾದ ರವೀಂದ್ರ ಕುಮಾರ್ ರುದ್ರಪಾದ, ಸೋಮಶೇಖರ ಕಟ್ಟೆಮನೆ ಗೆಲುವು ಪಡೆದರು.
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಮೈತ್ರಿ ಬೆಂಬಲಿತ ಗಿರೀಶ್ ಆಚಾರ್ಯ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾದ ಮೋಹನದಾಸ್ ರೈ , ಮಹಿಳಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ರಮ್ಯಾ ಪೈಲಾಜೆ, ಮೈತ್ರಿ ಅಭ್ಯರ್ಥಿ ಭಾರತಿ ದಿನೇಶ್ ಗೆಲುವು ಸಾಧಿಸಿದರು.ಪ.ಜಾತಿ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ
ದುಗ್ಗಪ್ಪ,ಪ.ಪಂ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಮಾಧವ ದೇವರಗದ್ದೆ ಗೆಲುವು ಸಾಧಿಸಿದ್ದಾರೆ.