ಕಡಬ: ಕಡಬ ಸರ್ಕಾರಿ ಸಮೂದಾಯ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವುದು, ಇಲ್ಲಿನ ಡಯಾಲಿಸಿಸ್ ಯಂತ್ರದ ಅಪರೇಟರ್ಗಳ ನೇಮಕದ ಬಗ್ಗೆ ಅರೋಗ್ಯ ಇಲಾಖಾ ಸಚಿವ ದಿನೇಶ್ ಗುಂಡುರಾವ್ ಜೊತೆ ಮಾತುಕತೆ ನಡೆಸಲಾಗಿದೆ. ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಂದು ತಿಂಗಳೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯಿದೆ ಎಂದು ಕಾಂಗ್ರೆಸ್ ಮುಖಂಡ ಜಿ ಕೃಷ್ಣಪ್ಪ ಹೇಳಿದರು.ಅವರು ಶನಿವಾರ ಕಡಬದಲ್ಲಿ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದರು. ಕಡಬದಲ್ಲಿ ಡಯಾಲಿಸಿಸ್ ಯಂತ್ರವಿದ್ದರೂ
ಅಪರೇಟರ್ಗಳ ನೇಮಕವಾಗಿಲ್ಲ, ನೆಲ್ಯಾಡಿ, ಶಿರಾಡಿ, ಕೊಯಿಲ, ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಗಳಿಗೆ ಖಾಯಂ ವೈದ್ಯರ ನೇಮಕದ ಬಗ್ಗೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ ಸಚಿವರು ಸೂಕ್ತಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಅರಣ್ಯ ಭಾಗದಲ್ಲಿ ಹಾದು ಹೊಗುವ ರಾಷ್ಟ್ರೀಯ ಹೆದ್ದಾರಿ ಎರಡು ಬದಿಗಳಲ್ಲಿ ತಡೆಗೋಡೆ ನಿರ್ಮಿಸುವುದರಿಂದ ರಸ್ತೆಯಲ್ಲಿ ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳು ಸಂಚರಿಸುವಂತಾಗಿದೆ ಇದಕ್ಕಾಗಿ ಇಚ್ಚಿಲಂಪಾಡಿ, ಅಡ್ಡಹೊಳೆ, ಮಣ್ಣಗುಡ್ಡಿ ಮೊದಲಾದೆಡೆ ಅಂಡರ್ಪಾಸ್ಗಳನ್ನು ನಿರ್ಮಿಸುವಂತೆ ಜಿಲ್ಲಾಧಿಗಳು ಅರಣ್ಯ ಅಧಿಕಾರಿಗಳ ಸಭೆ ನಡೆಸಿದ ವರದಿಯನ್ನು ಸಂಬಂದಪಟ್ಟ ಸಚಿವರ ಗಮನಕ್ಕೆ ತರಲಾಗಿದೆ. ನೂತನ ಕಡಬ ತಾಲೂಕು ಕಚೇರಿಯಲ್ಲಿ ಸುಮಾರು ೨೨ ಇಲಾಖೆಗಳ ಕಚೇರಿಗಳು ಇನ್ನೂ ಕಾರ್ಯರಂಭದ ಮಾಡದ ಬಗ್ಗೆ, ಕಡಬ ಪೇಟೆಯಲ್ಲಿ ಸರ್ಕಾರಿ ಬಸ್ಸು ನಿಲ್ದಾಣಕ್ಕಾಗಿ 2 ಎಕ್ರೆ ಜಾಗ ನಿಗದಿಪಡಿಸುವಂತೆ ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ದಿ, ಕಸವಿಲೇವಾರಿ, ಯಾತ್ರೀಕರಿಗೆ ಶೌಚಲಯದ ಕರತೆಯ ಬಗ್ಗೆ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರ ಗಮನಕ್ಕೆ ತರಲಾಗಿದ್ದು, ಸೂಕ್ತ ಕ್ರಮದ ಬಗ್ಗೆ ಭರವಸೆ ನಿಡಿದ್ದಾರೆ ಎಂದು ತಿಳಿಸಿದರು.
ಪತ್ರೀಕಾಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಮುಖಂಡರಾದ ಕೆ ಪಿ ತೋಮಸ್, ಆಶ್ರಪ್ ಶೇಡಿಗುಂಡಿ, ಪೂವಪ್ಪ ಕರ್ಕೆರ, ಭವಾನಿ ಶಂಕರ್, ಗಣೇಶ್ ಕೈಕುರೆ, ಎಚ್ ಆದಂ, ಶರೀಪ್ ಎ ಎಸ್, ಎ ಕೆ ಬಶೀರ್, ಕೆ ಪಿ ಅಬ್ರಾಹಂ,ಚಾಕೋ ವಿ ಎನ್, ಬಿನು ಮೊದಲಾದವರು ಇದ್ದರು