ಅಹ್ಮದಾಬಾದ್: ಪಾಕಿಸ್ಥಾನದ ವಿರುದ್ಧದ ಹೈವೋಲ್ಟೇಜ್
ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಆಡುತ್ತಾರೆ. ಈ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ‘ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಶುಭ್ಮನ್ ಗಿಲ್ 99% ಲಭ್ಯವಿದ್ದಾರೆ, ಆದರೆ ಪಂದ್ಯದ ದಿನದಂದು ಅವರ ಲಭ್ಯತೆಯ ಬಗ್ಗೆ
ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾಳೆ ನೋಡೋಣ ಎಂದು ಹೇಳಿದ್ದಾರೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಶನಿವಾರದ ಹೈ-ವೋಲ್ಟೇಜ್ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯಕ್ಕೆ ಸ್ಟಾರ್ ಓಪನರ್ ಶುಭ್ಮನ್ ಗಿಲ್ ಲಭ್ಯತೆ ಬಗ್ಗೆ ಭಾರೀ ಅಭಿಮಾನಿಗಳಲ್ಲಿ ಕುತೂಹಲ ಇದೆ. ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಾಕಷ್ಟು ಫಿಟ್ ಆಗಿದ್ದಾರೆ. ಶೇ. 99 ರಷ್ಟು ಅವರು ಆಡುವ ಸಾಧ್ಯತೆ ಇದೆ ಎಂದು ಖಚಿತಪಡಿಸಿದರು.
ಡೆಂಗ್ಯೂ ಕಾರಣದಿಂದಾಗಿ ಗಿಲ್ ವಿಶ್ವಕಪ್ನ ಮೊದಲ ಎರಡೂ ಪಂದ್ಯಗಳನ್ನು ಕಳೆದುಕೊಂಡಿದ್ದರು. ಆದರೆ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೊದಲು ಅವರು ಅಭ್ಯಾಸಕ್ಕೆ ಮರಳಿದ್ದಾರೆ.