ಸುಳ್ಯ: ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಕಾಲೇಜಿನ ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ. ಪಿ.ಬಿ. ಮಾತನಾಡಿ ಪರಿಸರ ನಾಶದಿಂದ ಜೀವ ಸಂಕುಲಗಳು ಅಪಾಯಗಳನ್ನು ಎದುರುಸುತ್ತಿದ್ದು ಪ್ರಾಕೃತಿಕ ವಿಕೋಪಗಳಿಂದಾಗಿ ಉತ್ತಮ ಬದುಕಿಗಾಗಿ
ಹೋರಾಡಬೇಕಾದ ಅನಿರ್ವಾಯತೆ ಇದೆ. ಸಮೃದ್ಧ ಪರಿಸರವನ್ನು ಸುಂದರ ನಾಳೆಗಳಿಗಾಗಿ ರಕ್ಷಿಸುವ, ಬೆಳೆಸುವ ಹೊಣೆಗಾರಿಗೆ ನಮ್ಮೆಲ್ಲರದ್ದು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ವಹಿಸಿದ್ದರು. ಎನ್.ಎನ್.ಎಸ್ ಘಟಕದ ಸಂಯೋಜನಾಧಿಕಾರಿ ಕಲಾವತಿ, ರೆಡ್ ಕ್ರಾಸ್ ಘಟಕದ ಅಧಿಕಾರಿ ಅರ್ಚನಾ ಆರ್.ರೈ ಮತ್ತು ಕಾನೂನು ನೆರವು ಸಮಿತಿಯ ಸಂಯೋಜಕಿ ನಯನಾ. ಪಿ.ಯು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ. ಹೆಚ್.ಎಸ್ ಹಾಗೂ ಗ್ರಂಥಾಧಿಕಾರಿ ವಸಂತ ಕುಮಾರ್ ಕಜ್ಜೋಡಿ, ಕಛೇರಿ ಅಧೀಕ್ಷಕರಾದ ಗೋಪಿನಾಥ್. ಕೆ ಹಾಗೂ ಕಾಲೇಜಿನ ಬೋದಕ, ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗಿಡ ನೆಡುವ, ಗಿಡ ಹಂಚುವ ಮೂಲಕ ಕಾರ್ಯಕ್ರಮ ನಡೆಯಿತು.