ಮಂಗಳೂರು: ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಆರಂಭಗೊಂಡಿದೆ. ರಾಜ್ಯದ 3.67 ಕೋಟಿ ಮತದಾರರು ನೀಡಿರುವ ಜನಾದೇಶ ಇಂದು ಬಹಿರಂಗವಾಗಲಿದೆ.
ವಿಧಾನಸಭೆಯ 224 ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಗೆ
ಸುರತ್ಕಲ್ನಲ್ಲಿ ಮತ ಎಣಿಕೆ
ಮೇ 10ರಂದು ಮತದಾನ ನಡೆದಿತ್ತು. 5.07 ಕೋಟಿ ಮತದಾರರಲ್ಲಿ 3.67 ಕೋಟಿ ಮಂದಿ ಮತ ಚಲಾಯಿಸಿದ್ದರು. 2,615 ಅಭ್ಯರ್ಥಿಗಳು ಕಣದಲ್ಲಿದ್ದು, ಜನರ ವಿಶ್ವಾಸಗೆದ್ದು ಯಾರು ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂಬುದು ಹೊರಬೀಳಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೆತ್ರಗಳ ಮತ ಎಣಿಕೆ
ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿಕೆ) ಆವರಣದಲ್ಲಿ ಆರಂಭಗೊಂಡಿದೆ. ಮತಯಂತ್ರಗಳನ್ನು ಇರಿಸಿದ್ದ ಭದ್ರತಾ ಕೊಠಡಿಗಳನ್ನು ಶನಿವಾರ ಬೆಳಿಗ್ಗೆ 7.40 ಕ್ಕೆ ತೆರೆಯಲಾಗಿದ್ದು ಎಂಟು ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಒಂಭತ್ತು ಗಂಟೆಯ ವೇಳೆಗೆ ಫಲಿತಾಂಶದ ಮುನ್ಸೂಚನೆಗಳು ಲಭಿಸುವ ಸಾಧ್ಯತೆ ಇದೆ. 12 ಗಂಟೆಯ ವೇಳೆಗೆ ಪೂರ್ಣ ಫಲಿತಾಂಶ ದೊರೆಯುವ ಸಾಧ್ಯತೆ ಇದೆ.8 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ 60 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಹೊರ ಬರಲಿದೆ.