ಸುಳ್ಯ: ದುಲ್ಫುಕಾರ್ ಧಫ್ ಅಸೋಸಿಯೇಷನ್ನ ಚಟುವಟಿಕೆಗಳನ್ನು ಮತ್ತೆ ಸಕ್ರಿಯಗೊಳಿಸಲು ಸಂಘವನ್ನು ಪುನರ್ ಸಂಘಟಿಸಲು ಸಂಘದ ಮಾಜಿ ಅಧ್ಯಕ್ಷ ಹನಿಫ ಬಿ. ಎಂ. ಅಧ್ಯಕ್ಷತೆಯಲ್ಲಿ ಸುಳ್ಯದ ಅನ್ಸಾರ್ ಸಭಾಭವನದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು
ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿದ್ದೀಕ್ ಕೊಡಿಯಮ್ಮೆ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ನ್ಯಾಷನಲ್,ಕೋಶಾಧಿಕಾರಿಯಾಗಿ ಅಬ್ದುಲ್ ಕಲಾಂ ಸುಳ್ಯ,ದಫ್ ತರಬೇತುದಾರರಾಗಿ ಅಬೂಬಕ್ಕರ್ ಸಂಭ್ರಮ, ಮತ್ತು ಸಿದ್ದೀಕ್ ಶುಕ್ರಿಯ ಆಯ್ಕೆಯಾದರು.
ಸಿದ್ದಿಕ್, ಹನೀಫ್, ಕಲಾಂ
ಸಭೆಯಲ್ಲಿ ದುಲ್ಫುಕರ್ನ ಮಾಜಿ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕ್ಕಾರ್, ಅಶ್ರಫ್ ನಾವೂರು, ಸಂಘದ ಸ್ಥಾಪಕ ಸದಸ್ಯರಾದ ಶರೀಫ್ ಫ್ರೂಟ್,
ಮುಸ್ತಫ ನಾವೂರು, ಬಶೀರ್ ವೆಜ್, ಹಾಗೂ ಸುಮಾರು 20ರಷ್ಟು ಸ್ಥಾಪಕ ನಿರ್ದೇಶಕರುಗಳು ಸದಸ್ಯರುಗಳು ಈ ಸಭೆಯಲ್ಲಿ ಭಾಗವಹಿಸಿದರು.